ಕ್ರೀಡೆಮೈಸೂರು

ಸೈಕಲ್ ಫೋಲೋ ಸ್ಪರ್ಧೆಗೆ ಮೈಸೂರು ಬಾಲಕಿಯರು

ಏ.6 ರಿಂದ  ಕೋಲ್ಕತ್ತಾದಲ್ಲಿ ನಡೆಯಲಿರುವ ನಾಲ್ಕು ದಿನಗಳ ಸೈಕಲ್ ಫೋಲೋ ಸ್ಪರ್ಧೆಗೆ ಮೈಸೂರಿನ ಬಾಲಕಿಯರು ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಏ. 6 ರಿಂದ 9ರವರೆಗೆ  ಕೊಲ್ಕತ್ತಾದಲ್ಲಿ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಮೈಸೂರಿನ ಶಾಲಾ ವಿದ್ಯಾರ್ಥಿನಿಯರಾದ ಲಿಖಿತಾ, ಪ್ರಿಯಾಂಕಾ ಮತ್ತು ಕಾಲೇಜು ವಿದ್ಯಾರ್ಥಿನಿಯರಾದ ನೇಹಾ ಹಾಗೂ ವಿದ್ಯಾ ಆರಾಧ್ಯಾ ಸೇರಿದಂತೆ ತರಬೇತುದಾರ ಮತ್ತು ಮ್ಯಾನೇಜರ್ ಅರುಣ್ ಪಾಟೀಲ್ ಕಲ್ಕತ್ತಾಗೆ ತೆರಳಿದ್ದಾರೆ. ಕರ್ನಾಟಕ ಸೈಕಲ್ ಫೋಲೋ ಅಸೋಸಿಯೇಷನ್ ವತಿಯಿಂದ ಎಲ್ಲಾ ಸೌಕರ್ಯಗಳನ್ನು ಇವರಿಗೆ ಒದಗಿಸಲಾಗಿದೆ ಎಂದು ಅರುಣ್ ಪಾಟೀಲ್ ತಿಳಿಸಿದರು.

ಈ ವೇಳೆ ಸಿಟಿಟುಡೆಯೊಂದಿಗೆ ಮಾತನಾಡಿದ ಕ್ರೀಡಾಪಟು ಪ್ರಿಯಾಂಕಾ ಸ್ಪರ್ಧೆಯಲ್ಲಿ ಭಾಗವಹಿಸಲು ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ಈ ಹಿಂದೆಯೂ ರಾಜಸ್ಥಾನದಲ್ಲಿ ನಡೆದ ಪಂದ್ಯದಲ್ಲಿ ಬೆಸ್ಟ್ ಪ್ಲೇಯರ್ ಪ್ರಶಸ್ತಿ ಪಡೆದುಕೊಂಡಿದ್ದೆ. ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ತಂಡ ಸಿಲ್ವರ್ ಗೆದ್ದಿದೆ. ನಮ್ಮ ತಂದೆ, ತಾಯಿ ಹಾಗೂ ಶಿಕ್ಷಕರು ಸೇರಿದಂತೆ ಸಹಪಾಠಿಗಳು ಸಹಕಾರ ನೀಡುತ್ತಾರೆ. ಇದು ನಾವು ಸಾಧನೆ ಮಾಡಲು ಸ್ಫೂರ್ತಿಯಾಗಿದೆ ಎಂದರು.

ಮೈಸೂರಿನಿಂದ ರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆಯಾಗಿ ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಾಲ್ಗೊಳ್ಳುವ ಮೈಸೂರು ಮಂದಿಗೆ ಆಲ್ ದಿ ಬೆಸ್ಟ್ (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: