ಮೈಸೂರು

ಗಾಂಜಾ ಮಾರಾಟ ; ವ್ಯಕ್ತಿಯ ಬಂಧನ

ಮೈಸೂರು,ಸೆ.25:- ಮೈಸೂರು ಜಿಲ್ಲಾ ಕಾರಾಗೃಹದ ಕಾಂಪೌಂಡ್ ಪಕ್ಕದಲ್ಲಿ ಗಾಂಜಾ ಇಟ್ಟುಕೊಂಡು ನಿಂತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಹಸ್ರತ್ ಪಾಷಾ (31)ಎಂದು ಗುರುತಿಸಲಾಗಿದೆ. ಈತನಿಂದ 550ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತ ಗಾಂಜಾ ಮಾರಾಟ ಮಾಡುತ್ತಿದ್ದ ಎಂಬ ಖಚಿತ ಮಾಹಿತಿಯ ಮೇರೆಗೆ ಇನ್ಸಪೆಕ್ಟರ್ ವಿ.ನಾರಾಯಣ್ ಸ್ವಾಮಿ ಕಾರ್ಯಾಚರಣೆ ಕೈಗೊಂಡು ವ್ಯಕ್ತಿಯನ್ನು ಬಂಧಿಸಿದರು. ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.,ಎಸ್,ಎಸ್.ಎಚ್)

Leave a Reply

comments

Related Articles

error: