ಪ್ರಮುಖ ಸುದ್ದಿಮನರಂಜನೆ

ಗಾಯನ ನಿಲ್ಲಿಸಿದ ಗಾನ ಗಂಧರ್ವ : ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಇನ್ನಿಲ್ಲ

ದೇಶ(ಚೆನ್ನೈ)ಸೆ.25:- ಬಾಲಿವುಡ್ನ ಮತ್ತು ಸ್ಯಾಂಡಲ್ ವುಡ್ ನಲ್ಲಿ ಸುಮಧುರ ಗೀತೆಗಳನ್ನು ಹಾಡಿದ ಹಿರಿಯ ಗಾಯಕ, ಗಾನ ಗಂಧರ್ವ ಎಸ್ಪಿ ಬಾಲಸುಬ್ರಮಣಿಯನ್ ಇಹಲೋಕ ತ್ಯಜಿಸಿದ್ದಾರೆ.
ಅವರ ಮಗ ಎಸ್ ಪಿ ಚರಣ್ ತಂದೆಯ ಸಾವಿನ ಕುರಿತು ಖಚಿತಪಡಿಸಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಕೊರೋನಾ ವೈರಸ್ ಸೋಂಕಿಗೆ ಒಳಗಾಗಿ ಆಗಸ್ಟ್ 5 ರಿಂದ ಬಾಲಸುಬ್ರಮಣಿಯನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ನಿನ್ನೆ ಅವರ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಆಸ್ಪತ್ರೆ ಹೇಳಿಕೆ ನೀಡಿತ್ತು. ಅವರನ್ನು ಲೈಫ್ ಸಪೋರ್ಟ್ ಸಿಸ್ಟಮ್ನಲ್ಲಿ ಇರಿಸಲಾಗಿದೆ. ಅವರ ಸ್ಥಿತಿ ಹದಗೆಡುತ್ತಿದೆ ಎಂದು ಆಸ್ಪತ್ರೆ ತಿಳಿಸಿತ್ತು.
ಗಾಯಕ ಎಸ್. ಪಿ.ಬಾಲಸುಬ್ರಹ್ಮಣ್ಯಂ ಹಿಂದಿ ಚಲನಚಿತ್ರಗಳ ಗಾಯನದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. 1989ರಲ್ಲಿ ತೆರೆಕಂಡ ನಟ ಸಲ್ಮಾನ್ ಖಾನ್ ಭಾಗ್ಯಶ್ರೀ ಅಭಿನಯದ ಸೂಪರ್ ಹಿಟ್ ಚಿತ್ರ ‘ಮೈನೆ ಪ್ಯಾರ್ ಕಿಯಾ’ ದಲ್ಲಿ ಹಾಡಿದ್ದರು. ಎಲ್ಲಾ ಹಾಡುಗಳು ಸೂಪರ್ ಹಿಟ್ ಆದವು. ಅದರ ನಂತರ ಅವರು ಸಲ್ಮಾನ್ ಅವರ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಎಲ್ಲಾ ಹಾಡುಗಳನ್ನು ಹಾಡಿದ್ದರು. ಸಲ್ಮಾನ್ ಖಾನ್ ಅವರ ಧ್ವನಿಯೆಂದು ಅನೇಕ ವರ್ಷಗಳಿಂದ ಗುರುತಿಸ್ಪಟ್ಟಿದ್ದರು. ಇದರ ನಂತರವೂ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅನೇಕ ಹಿಂದಿ ಚಿತ್ರಗಳಲ್ಲಿ ವಿವಿಧ ತಾರೆಯರಿಗೆ ಧ್ವನಿ ನೀಡಿದ್ದಾರೆ.
ಎಸ್ಪಿ ಬಾಲಸುಬ್ರಹ್ಮಣ್ಯಂ ಇದುವರೆಗೆ ಒಟ್ಟು 16 ಭಾಷೆಗಳಲ್ಲಿ 40,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಹಾಡುಗಳಿಗೆ ನಾಲ್ಕು ಭಾಷೆಯ ಗಾಯನಗಳಿಗೆ 6 ಬಾರಿ ಅತ್ಯುತ್ತಮ ಗಾಯಕನಾಗಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದರು. ಅವರಿಗೆ 2001 ರಲ್ಲಿ ಪದ್ಮಶ್ರೀ ಮತ್ತು 2011 ರಲ್ಲಿ ಪದ್ಮಭೂಷಣವನ್ನು ಭಾರತ ಸರ್ಕಾರ ನೀಡಿ ಗೌರವಿಸಿದೆ.
ಅದ್ಭುತ ಗಾಯಕನ ನಿಧನಕ್ಕೆ ಕಲಾಲೋಕ,ಗಾನಲೋಕ, ಚಿತ್ರಲೋಕ ಕಂಬನಿ ಮಿಡಿದಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: