ಮೈಸೂರು

ಮೈಸೂರು ವಿಭಾಗೀಯ ರೈಲ್ವೆ ಕಛೇರಿಯಲ್ಲಿ ಅಗಲಿದ ಸಚಿವ ಸುರೇಶ್ ಅಂಗಡಿಯವರಿಗೆ ಶ್ರದ್ಧಾಂಜಲಿ ಅರ್ಪಣೆ

ಮೈಸೂರು,ಸೆ.25:- ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರ ದುರದೃಷ್ಟಕರ ಮತ್ತು ಅಕಾಲಿಕ ನಿಧನವು ಆಘಾತಕಾರಿ ಮತ್ತು ಪದಗಳನ್ನು ಮೀರಿದುದಾಗಿದೆ. ಸಂಪೂರ್ಣ ರೈಲ್ವೆ ಕುಟುಂಬವೇ ದುಃಖದಿಂದ ತುಂಬಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಅಪರ್ಣ ಗರ್ಗ್
ತಿಳಿಸಿದರು.
ಅವರು ವಿಭಾಗೀಯ ಕಚೇರಿ ಆವರಣದಲ್ಲಿ ಶ್ರದ್ಧಾಂಜಲಿ ಸಮರ್ಪಿಸಿ ಮಾತನಾಡಿದರು. ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ದೇವಸಹಾಯಂ , ಹಿರಿಯ ಅಧಿಕಾರಿಗಳು ಮತ್ತು ವಿಭಾಗೀಯ ಕಚೇರಿ ಮತ್ತು ವಿಭಾಗದ ಇತರೆ ಎಲ್ಲಾ ರೈಲ್ವೆ ಸಿಬ್ಬಂದಿಗಳು ವಿಭಾಗೀಯ ಕಚೇರಿ ಆವರಣದಲ್ಲಿ ಒಟ್ಟುಗೂಡಿ ಅಗಲಿದ ಸಚಿವರಿಗೆ ಎರಡು ನಿಮಿಷಗಳ ಮೌನಾಚರಣೆ ಮಾಡಿ ಗೌರವ ಅರ್ಪಿಸಿದರು. ಮೃತರ ಆತ್ಮ ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರಿನ ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿಗಳಾದ ಪ್ರಶಾಂತ್ ಮಾಸ್ತಿಹೊಳಿ ಸುರೇಶ್ ಅಂಗಡಿ ಅವರ ನೇತೃತ್ವದಲ್ಲಿ ನಡೆದ ರೈಲ್ವೆಯ ಅಭಿವೃದ್ಧಿಗಳನ್ನು, ವಿಶೇಷವಾಗಿ ದೀರ್ಘಾವಧಿಯಿಂದ ಬಾಕಿ ಇದ್ದ ಯೋಜನೆಗಳನ್ನು ಸಂಪೂರ್ಣಗೊಳಿಸಲು ಮತ್ತು ಈ ಪ್ರದೇಶದ ಜನರ ಇತರ ಬೇಡಿಕೆಗಳನ್ನು ಈಡೇರಿಸುವಲ್ಲಿ ಅವರ ಕಾಳಜಿಯನ್ನು ನೆನಪಿಸಿಕೊಂಡರು ಮತ್ತು ದುಃಖಿತ ಕುಟುಂಬಕ್ಕೆ ಸಂತಾಪ ಸೂಚಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: