ಮೈಸೂರು

ಮಹಿಳೆ ಸಾವು : ವರದಕ್ಷಿಣೆ ಕಿರುಕುಳವೆಂದು ಆರೋಪಿಸಿದ ಸಹೋದರ

ಮೈಸೂರು,ಸೆ.26:- ಎನ್.ಆರ್.ಮೊಹಲ್ಲಾದ ಗಣೇಶ ನಗರದ ನಿವಾಸಿ ಮಹಿಳೆಯೋರ್ವಳು ಸಾವನ್ನಪ್ಪಿದ್ದು, ಮಹಿಳೆಯ ಸಹೋದರ ವರದಕ್ಷಿಣೆ ಕಿರುಕುಳ ನಿಡಿದ್ದಾರೆಂದು ಆರೋಪಿಸಿದ್ದಾರೆ.
ಗಣೇಶ್ ನಗರದ ನಿವಾಸಿ ಕುಮಾರಿ(25)ಎಂಬಾಕೆಯೇ ಮೃತಪಟ್ಟಿದ್ದು, ಆಕೆಯ ಪತಿ ಮನೆಯವರು ಕೊಲೆ ಮಾಡಿದ್ದಾರೆಂದು ಸಹೋದರ ಆರೋಪಿಸಿದ್ದಾರೆ. ನಂಜನಗೂಡು ತಾಲೂಕಿನ ಕೂಡ್ಲಾಪುರ ಗ್ರಾಮದ ಕುಮಾರಿ 2018ರಲ್ಲಿ ಮಹೇಶ್ ಎಂಬಾತನನ್ನು ವಿವಾಹವಾಗಿದ್ದರು. ವರದಕ್ಷಿಣೆಗಾಗಿ ಪರಿ ಮನೆಯವರು ಪೀಡಿಸುತ್ತಿದ್ದು ಹಲವು ಬಾರಿ ರಾಜಿ ಪಂಚಾಯಿತಿ ನಡೆದಿತ್ತು. ಮೊನ್ನೆ ಕರೆ ಮಾಡಿ ಕುಮಾರಿ ನೇಣು ಹಾಕಿಕೊಂಡಿರುವುದಾಗಿ ತಿಳಿಸಿದ್ದು ನಂತರ ಆಸ್ಪತ್ರೆಗೆ ಹೋಗಿ ನೋಡಲಾಗಿ ಕುತ್ತಿಗೆ ಮತ್ತಿತರ ಭಾಗಗಳ ಮೇಲೆ ಗಾಯದ ಗುರುತುಗಳು ಕಂಡು ಬಂದಿವೆ ಎಂದು ಕುಮಾರಿಯ ಸಹೋದರ ನಾಗೇಶ್ ಅವರು ಮಹೇಶ್, ಬಸಮ್ಮಣ್ಣಿ, ಮಹದೇವಶೆಟ್ಟಿ, ಛೈತ್ರಾ, ಮನು ವಿರುದ್ಧ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆಂದು ದೂರು ನೀಡಿದ್ದಾರೆ.
ಉದಯಗಿರಿ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: