ಮೈಸೂರು

ಅಧಿಕ ಮಾಸದ ಪ್ರಯುಕ್ತ 108ಭಕ್ತರಿಗೆ ಭಗವದ್ಗೀತೆ ಪುಸ್ತಕ ಸಮರ್ಪಣೆ

ಮೈಸೂರು,ಸೆ.26:- ಶ್ರೀ ಅಭಯಂ ಫೌಂಡೇಷನ್ ವತಿಯಿಂದ ಒಂಟಿಕೊಪ್ಪಲ್ ನಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್ ನಲ್ಲಿಂದು ಅಧಿಕ ಮಾಸದ ಪ್ರಯುಕ್ತ 108ಭಕ್ತರಿಗೆ ಭಗವದ್ಗೀತೆ ಪುಸ್ತಕ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮೇಲುಕೋಟೆ ವಂಗೀಪುರ ನಂಬೀಮಠದ ಇಳೈ ಆಳ್ವಾರ್ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಈ ಸಂದರ್ಭ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಶ್ರೀಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ್, ಹಿರಿಯ ಸಮಾಜ ಸೇವಕ ಡಾ.ರಘುರಾಮ್ ವಾಜಪೇಯಿ, ಅಭಯಂ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಎಸ್.ಮುರಳೀಧರ್ ಶಾಸ್ತಾ, ಮಮತೆಯ ಮಡಿಲು ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕರಾದ ಜ್ಯೋತಿ ಪ್ರಭಾ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: