ಕರ್ನಾಟಕನಮ್ಮೂರುಪ್ರಮುಖ ಸುದ್ದಿಮೈಸೂರು

ದಸರಾ ಪ್ರಯುಕ್ತ ಮಾವುತರಿಗೆ ಕಿಟ್ ವಿತರಿಸಿದ ರಮಾನಾಥ ರೈ

ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅರಮನೆ ಆವರಣದಲ್ಲಿ ಬುಧವಾರ ನಾಡಹಬ್ಬದ  ಪ್ರಯುಕ್ತ ಮಾವುತರಿಗೆ ಸಮವಸ್ತ್ರದ ಕಿಟ್ ವಿತರಿಸಿದರು.

ಬಳಿಕ ಮಾತನಾಡಿದ ಅವರು  ಕಳೆದ ಹಲವಾರು ವರ್ಷಗಳಿಂದ ಮಾವುತರು ಮತ್ತು ಕಾವಾಡಿಗಳು ಜಂಬೂಸವಾರಿಯಲ್ಲಿ ಪಾಲ್ಗೊಂಡು ಪ್ರಮುಖ ಪಾತ್ರ ನಿರ್ವಹಿಸುತ್ತ ಬಂದಿದ್ದಾರೆ. ಈ ಸಮಯದಲ್ಲಿ ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ. ಒಟ್ಟು 30 ಕಿಟ್ ಹಾಗೂ ಸಮವಸ್ತ್ರವನ್ನು ಮಾವುತರಿಗೆ ನೀಡಲಾಗಿದೆ. ನಾವು  ಈ ಬಾರಿ 28ಕಾವಾಡಿಗರನ್ನು ನೇಮಿಸಿಕೊಂಡಿದ್ದೇವೆ. ಕೆಲವೇ ದಿನಗಳಲ್ಲಿ ಅವರಿಗೆ ಪದೋನ್ನತಿ ನೀಡಲಾಗುವುದು ಎಂದರು. ಮೈಸೂರು ಮೃಗಾಲಯವನ್ನು ವಿಸ್ತರಿಸಲಾಗುವುದೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಅದಕ್ಕೆ ಸೂಕ್ತ ಜಾಗವನ್ನು ಇನ್ನೂ ನೋಡಲಾಗಿಲ್ಲ. ಸದ್ಯದಲ್ಲಿಯೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ದಸರಾ ಉತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಮಾವುತರಿಗೆ ವಿತರಿಸಲಾದ ಕಿಟ್ ಬ್ಯಾಗ್, ಸಮವಸ್ತ್ರ, ಶೂ, ಬೆಲ್ಟ್ ಗಳನ್ನೊಳಗೊಂಡಿದೆ.

Leave a Reply

comments

Related Articles

error: