ಮೈಸೂರು

ಲ್ಯಾಪಟಾಪ್ ಪತ್ತೆ : ವ್ಯಕ್ತಿಯ ಬಂಧನ

ಮಾರ್ಚ್ 14ರಂದು ಎಸ್.ಜೆ.ಸಿ.ಇ ಕ್ಯಾಂಪಸ್ ಆಡಿಟೋರಿಯಂನಲ್ಲಿ ಕಳುವಾಗಿದ್ದ ವಿದ್ಯಾರ್ಥಿಯ ಲ್ಯಾಪ್ ಟಾಪ್ ಪತ್ತೆಯಾಗಿದ್ದು, ಕಳವು ಮಾಡಿದ ವ್ಯಕ್ತಿಯನ್ನು ಬಂಧಿಸುವಲ್ಲಿ ಜಯಲಕ್ಷ್ಮಿಪುರಂ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಮಂಚೇಗೌಡನ ಕೊಪ್ಪಲಿನ ನಟೇಶ್ (32)ಎಂದು ಗುರುತಿಸಲಾಗಿದೆ. ಈತ ಎಸ್.ಜೆ.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎರಡನೇ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಕ್ಯಾಂಪಸ್ ನಲ್ಲಿರುವ ಆಡಿಟೋರಿಯಂನಲ್ಲಿ ನಡೆಯುತ್ತಿದ್ದ ಡ್ಯಾನ್ಸ್ ರಿಹರ್ಸಲ್ ಕಾರ್ಯಕ್ರಮ ನೋಡಲು ಹೋಗಿದ್ದು, ಅಲ್ಲಿ ಕುರ್ಚಿಯ ಮೇಲೆ ಇರಿಸಲಾದ ಬ್ಯಾಗ್ ಅನ್ನು ಕಳುವು ಮಾಡಿರುವುದಾಗಿ  ವಿಚಾರಣೆ ವೇಳೆ ತಿಳಿಸಿದ್ದಾನೆ. ಈತನಿಂದ ಡೆಲ್ ಕಂಪನಿಯ 40,000ರೂ.ಮೌಲ್ಯದ ಲ್ಯಾಪ್ ಟಾಪ್ ಮತ್ತು ಮೊಬೈಲ್ ನ್ನು ವಶಕ್ಕೆ ಪಡೆಯಲಾಗಿದೆ.

ಪತ್ತೆ ಕಾರ್ಯದಲ್ಲಿ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯ ನಿರೀಕ್ಷಕರಾದ ಸಿ.ಎಂ.ರವೀಂದ್ರ, ಎಎಸ್ಐ ಸುರೇಶ್, ಸಿಬ್ಬಂದಿಗಳಾದ ಲೋಕೇಶ್, ಎನ್.ಸಿದ್ಧಿಖಿ ಅಹ್ಮದ್, ಪ್ರಕಾಶ್ ಪಾಲ್ಗೊಂಡಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: