ಪ್ರಮುಖ ಸುದ್ದಿಮೈಸೂರು

ಏನೂ ಮಾಡದ ಯಡಿಯೂರಪ್ಪ ಮುಂದೇನು ಮಾಡುತ್ತಾರೆ : ಡಿಕೆಶಿ ಪ್ರಶ್ನೆ

ಗುಂಡ್ಲುಪೇಟೆ ಚುನಾವಣಾ ಪ್ರಚಾರಕ್ಕೆ ಡಿ.ಕೆ.ಶಿವಕುಮಾರ್ ಆಗಮಿಸಿದ್ದು, ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು ಅಧಿಕಾರವಿದ್ದಾಗ ಏನೂ ಮಾಡದ ಯಡಿಯೂರಪ್ಪ ಮುಂದೇನು ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಅವರಿಗೆ ವಿಪಕ್ಷ ನಾಯಕನಾಗಿ ಮುಂದೆ ಅಧಿಕಾರ ಸಿಗಲಿದೆ. ನಾವು ಅಧಿಕಾರದಲ್ಲಿರುವುದರಿಂದ ಶಾಂತವಾಗಿದ್ದೇವೆ. ನಮ್ಮನ್ನು ಕೆಣಕೋಕೆ ಹೋಗಬೇಡಿ. ಇದನ್ನೆಲ್ಲಾ ಬೇರೆ ಕಡೆ ಇಟ್ಟುಕೊಳ್ಳಿ ಎಂದು ಅವಾಜ್ ಹಾಕಿದರು.

ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ ಯಡಿಯೂರಪ್ಪನವರೆ ಇಲ್ಲಿ ಬಂದು ಸುತ್ತಾಡೋ ಬದಲು ಮೋದಿ ಬಳಿ ಹೋಗಿ ಸಾಲ ಮನ್ನಾ ಮಾಡಿಸ್ಕೊಂಡು ಬನ್ನಿ ಎಂದರು.

ಯಡಿಯೂರಪ್ಪನಿಗೆ ವಚನವೇ ಗೊತ್ತಿಲ್ಲ. ಅದಕ್ಕೇ ಅವರ ಪಕ್ಷದಲ್ಲಿ ಅನುಭವ ಮಂಟಪವಿಲ್ಲ.ಒಂಭತ್ತನೇ ತಾರೀಖು ನೀವು ಹಸ್ತದ ಗುಂಡಿ ಒತ್ತಿದರೆ ಇಲ್ಲಿ ಬರೋ ಟೊಂಯ್ ಶಬ್ದಕ್ಕೆ ಬೆಂಗಳೂರಲ್ಲಿ ಬಿಜೆಪಿಯವರು ಕುಂಯ್ ಅನ್ನಬೇಕು ಎಂದು ತಮ್ಮ ವರಸೆಯನ್ನು ಶುರುಹಚ್ಚಿಕೊಂಡರು. (ಕೆ.ಎಸ್-ಎಸ್.ಎಚ್)

 

Leave a Reply

comments

Related Articles

error: