ಮೈಸೂರು

ಮೃಗಾಲಯ ಪ್ರಾಣಿ -ಪಕ್ಷಿಗಳ ದತ್ತು ಸ್ವೀಕಾರ

ಮೈಸೂರು.ಸೆ.29:- ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಬೆಂಗಳೂರಿನ ಬಿ.ಎಸ್.ದಿನೇಶ್ ಎಂಬವರು 4 ಸಾವಿರ ರೂ. ಪಾವತಿಸಿ ನಾಗರ ಹಾವು-2, ಮುಂಬೈನ ಅಭಿಜಾತ್ ಮಧು ಎಂಬವರು 1 ಸಾವಿರ ರೂ. ಪಾವತಿಸಿ ಲವ್ಬರ್ಡ್ ಹಾಗೂ ಜಗತ್ ನಾರಾಯಣ್ ಚೌಧರಿ ಎಂಬವರು 7 ಸಾವಿರ ರೂ. ಪಾವತಿಸಿ ಕಾಳಿಂಗ ಸರ್ಪವನ್ನು 1 ವರ್ಷದ ಅವಧಿಗೆ ದತ್ತು ಸ್ವೀಕರಿಸಿರುತ್ತಾರೆ.
ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಸಂರಕ್ಷಣೆ ಹಾಗೂ ಮೃಗಾಲಯ ನಿರ್ವಹಣೆಗೆ ಕೈಜೋಡಿಸಿದ ಎಲ್ಲರಿಗೂ ಮೃಗಾಲಯವು ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: