ಮೈಸೂರು

ಪೌರಕಾರ್ಮಿಕರಿಗೆ ನೇರ ವೇತನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಸೆ.29:- ಪೌರಕಾರ್ಮಿಕರಿಗೆ ನೇರ ವೇತನ ನೀಡುವಂತೆ ಒತ್ತಾಯಿಸಿ ಮೈಸೂರು ನಗರ ಪಾಲಿಕೆ ಖಾಯಂ ಪೌರಕಾರ್ಮಿಕರ ಹಾಗೂ ಗುತ್ತಿಗೆ ಪೌರಕಾರ್ಮಿಕರ ಮಹಾಸಂಘ ವತಿಯಿಂದ ಪ್ರತಿಭಟನೆ ನಡೆಯಿತು.
ಮಹಾನಗರ ಪಾಲಿಕೆ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಮೈಸೂರು ಮಹಾನಗರ ಪಾಲಿಕೆಯಲ್ಲಿ ಸ್ವಚ್ಛತಾ ವಾಹನ ಚಾಲಕರಾಗಿ ಮತ್ತು ಭಾರೀ ವಾಹನ ಚಾಲಕರಾಗಿ ಸುಮಾರು 9-10 ವರ್ಷಗಳಿಂದ ಕೆಲಸ ಮಾಡುತ್ತಿರುವುದರಿಂದ ಇವರುಗಳಿಗೂ ಸಹ ಹೊರಗುತ್ತಿಗೆ ಪದ್ಧತಿಯನ್ನು ರದ್ಧುಪಡಿಸಿ ನೇರವೇತನ ನೀಡುವಂತೆ ಒತ್ತಾಯಿಸಿದರು. ಈಗಾಗಲೇಪೌರಕಾರ್ಮಿಕರಿಗೆ ನೇರಪಾವತಿ ಆದೇಶವಾಗಿರುವುದರಿಂದ ಮತ್ತು ಪೌರಕಾರ್ಮಿಕರಿಗೆ ಬೆಳಗಿನ ಉಪಹಾರದ ಭತ್ಯೆ ನೀಡಿರುವಂತೆ ಇವರುಗಳಿಗೂ ಸಹ ಬೆಳಗಿನ ಉಪಹಾರದ ಉಳಿಕೆ ಭತ್ಯೆಯನ್ನು ಬಿಡುಗಡೆಗೊಳಿಸಬೇಕು. ಈಗಾಗಲೇ ಪೌರಕಾರ್ಮಿಕರಿಗೆ ನೇರಪಾವತಿ ಆದೇಶವಾಗಿರುವಂತೆ ಇವರುಗಳಿಗೂ ಸಹ ನೇರವೇತನ ಪಾವತಿ ಆದೇಶ ಮಾಡಿಕೊಡಬೇಕೆಂದು ಹಾಗೂ ಹೆಲ್ತ್ ಕಾರ್ಡ್ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಉನ್ನತ ಸಮಿತಿ ಅಧ್ಯಕ್ಷ ಎನ್.ಮಾರ್, ಅಧ್ಯಕ್ಷ ಮಹದೇವ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಜಿಲ್ಲಾಧ್ಯಕ್ಷ ಎಸ್.ಎಂ.ಪಳನಿಸ್ವಾಮಿ, ಮುಖಂಡರಾದ ಆರ್ ಆರ್ ರಮೇಶ್, ಅರುಣ್ ಕುಮಾರ್, ಕುಮಾರಸ್ವಾಮಿ, ಸ್ವಾಮಿ, ರಾಜೀವ್, ಎಸ್.ಮುರುಗೇಶ್, ಶೇಷಣ್ಣ, ಬಾಬು, ಬಸವರಾಜು, ಕೊಲ್ಲಪ್ಪ ಮತ್ತಿತರರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: