ಪ್ರಮುಖ ಸುದ್ದಿ

ಲಾಕ್ ಡೌನ್ ಸಮಯದಲ್ಲಿ 90 ಕೋಟಿ ರೂ ಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ!

ದೇಶ(ನವದೆಹಲಿ)ಸೆ.30:- ದೇಶದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯ ಲಾಕ್ ಡೌನ್ ಅವಧಿಯಲ್ಲಿ ಗಳಿಸಿದ ಹಣ ಎಷ್ಟು ಅಂತ ಗೊತ್ತಾದರೆ ಮೂರ್ಛೆ ಹೋಗುವುದು ಗ್ಯಾರಂಟಿ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಕಳೆದ 6 ತಿಂಗಳಿಂದ 90 ಕೋಟಿ ರೂ. ಗಳಿಸಿರುವ ಕುರಿತು ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2020 ರ ಒಂಭತ್ತನೇ ಆವೃತ್ತಿಯಲ್ಲಿ ಬಹಿರಂಗವಾಗಿದೆ
ಆ.31,2020ರವರೆಗೆ 1,000 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಭಾರತದ ಶ್ರೀಮಂತರ ಪಟ್ಟಿಗೆ ಸೇರುತ್ತಾರೆ. ಕೊರೋನಾ ಮತ್ತು ಲಾಕ್‌ಡೌನ್‌ನಿಂದಾಗಿ ದೇಶದ ಜಿಡಿಪಿ ಮೈನಸ್‌ಗೆ ಹೋಗಿರುವ ಸಮಯದಲ್ಲಿ ಮುಖೇಶ್ ಅಂಬಾನಿಯವರ ಗಳಿಕೆ ಹೆಚ್ಚಾಗಿದೆ. ಮುಖೇಶ್ ಅಂಬಾನಿ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಸತತ 9 ನೇ ವರ್ಷ ಮೊದಲ ಸ್ಥಾನದಲ್ಲಿದ್ದಾರೆ. ವರದಿಯ ಪ್ರಕಾರ, ಅವರ ಒಟ್ಟು ಆದಾಯ 6,58,400 ಕೋಟಿ ರೂ. ಕಳೆದ ಒಂದು ವರ್ಷದಲ್ಲಿ ಅವರ ಸಂಪತ್ತು ಶೇಕಡಾ 73 ರಷ್ಟು ಹೆಚ್ಚಾಗಿದೆ.
ಹುರುನ್ ಇಂಡಿಯಾ ವರದಿಯ ಪ್ರಕಾರ, ಲಾಕ್ ಡೌನ್ ಅವಧಿಯಲ್ಲಿ ಅಂದರೆ ಮಾರ್ಚ್ ನಿಂದ ಆಗಸ್ಟ್ ವರೆಗೆ ಮುಖೇಶ್ ಅಂಬಾನಿ 90 ಕೋಟಿ ಗಳಿಸಿದ್ದಾರೆ. ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿ . 1,43,700 ಕೋಟಿ ರೂ. ಆಸ್ತಿಯೊಂದಿಗೆ ಲಂಡನ್ ಮೂಲದ ಹಿಂದೂಜಾ ಸಹೋದರರು ಎರಡನೇ ಸ್ಥಾನ ಪಡೆದಿದ್ದಾರೆ. ಪಟ್ಟಿಯಲ್ಲಿ ಮೂರನೇ ಸ್ಥಾನ ಎಚ್‌ಸಿಎಲ್ ಸಂಸ್ಥಾಪಕ ಶಿವ ನಾಡರ್ 1,41,700 ಕೋಟಿ ರೂ. ಗೌತಮ್ ಅದಾನಿ ಮತ್ತು ಕುಟುಂಬ ನಾಲ್ಕನೇ ಸ್ಥಾನದಲ್ಲಿ ಮತ್ತು ಅಜೀಮ್ ಪ್ರೇಮ್ಜಿ ಐದನೇ ಸ್ಥಾನದಲ್ಲಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: