ಪ್ರಮುಖ ಸುದ್ದಿ

ಚಾಮರಾಜನಗರ ಜಿಲ್ಲೆಯಲ್ಲಿ 99 ಕೋವಿಡ್ ಪ್ರಕರಣ ಪತ್ತೆ

ರಾಜ್ಯ(ಚಾಮರಾಜನಗರ)ಸೆ.30:- ಚಾಮರಾಜನಗರ ಜಿಲ್ಲೆಯಲ್ಲಿ 99 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 59 ಮಂದಿ ಗುಣಮುಖರಾಗಿದ್ದಾರೆ. ನಾಲ್ವರು ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 3985 ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ 3205 ಮಂದಿ ಗುಣಮುಖರಾಗಿದ್ದಾರೆ. ಸದ್ಯ 687 ಸಕ್ರಿಯ ಪ್ರಕರಣಗಳಿವೆ. ಚಾ.ನಗರ ತಾಲೂಕಿನ ಕಾಳನಹುಂಡಿ ಗ್ರಾಮದ 60 ವರ್ಷದ ಪುರುಷ, ಗುಂಡ್ಲುಪೇಟೆ ತಾಲೂಕಿನ 80 ವರ್ಷದ ಮಹಿಳೆ, ಹನೂರು ತಾಲೂಕು ಬಂಡಳ್ಳಿಯ 55 ವರ್ಷದ ಪುರುಷ ಹಾಗೂ ಯಳಂದೂರು ಪಟ್ಟಣದ 52 ವರ್ಷದ ಪುರುಷ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

99 ಹೊಸ ಪ್ರಕರಣಗಳ ಪೈಕಿ ಗುಂಡ್ಲುಪೇಟೆ ತಾಲೂಕಿನಲ್ಲಿ 31, ಚಾ.ನಗರ ತಾಲೂಕಿನಲ್ಲಿ ಅತಿ ಹೆಚ್ಚು 41 , ಕೊಳ್ಳೇಗಾಲ ತಾಲೂಕಿನಲ್ಲಿ 13, ಯಳಂದೂರು 5 ಹಾಗೂ ಹನೂರು ತಾಲೂಕಿನಲ್ಲಿ 9 ಪ್ರಕರಣಗಳು ಪತ್ತೆಯಾಗಿವೆ. 1037 ಮಾದರಿಗಳನ್ನು ಪರೀಕ್ಷಿಸಲಾಗಿತ್ತು. 99 ಪ್ರಕರಣ ಪತ್ತೆಯಾಗಿದ್ದು, 59ಮಂದಿ ಗುಣಮುಖರಾಗಿದ್ದಾರೆ. 04ಮಂದಿ ಸಾವನ್ನಪ್ಪಿದ್ದು. ಇದುವರೆಗೆ ಒಟ್ಟು 93ಮಂದಿ ಸಾವನ್ನಪ್ಪಿದ್ದಾರೆ. 687 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ 3985 ಸೋಂಕಿತರಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: