ಮೈಸೂರು

ಜೆಎಸ್ ಎಸ್ ಆಸ್ಪತ್ರೆಯಲ್ಲಿ ವಿಶ್ವಹೃದಯ ದಿನ ಆಚರಣೆ

ಮೈಸೂರು,ಸೆ.29:- ಜೆಎಸ್ ಎಸ್ ಆಸ್ಪತ್ರೆಯಲ್ಲಿ ಈ ವರ್ಷ ಯೂಸ್ ಹಾರ್ಟ್ ಟು ಟ್ರೀಟ್ ಹಾರ್ಟ್ ಡಿಸೀಸ್ ಎಂ ಧ್ಯೇಯ ವಾಕ್ಯದೊಂದಿಗೆ ವಿಶ್ವ ಹೃದಯವನ್ನು ಆಚರಿಸಲಾಯಿತು.
ಸಾರ್ವಜನಿಕರಿಗೆ ಹೃದ್ರೋಗಿಗಳು ಮತ್ತು ಕೋವಿಡ್-19 ಸಂದೇಹಗಳ ಬಗ್ಗೆ ತಿಳುವಳಿಕೆ ನೀಡುವ ಸಲುವಾಗಿ ಜೆಎಸ್ ಎಸ್ ಆಯೋಜಿಸಿದ್ದ ವಿಶ್ವಹೃದಯದಿನಾಚರಣೆಗೆ ಜೆಎಸ್ ಎಸ್ ಆಸ್ಪತ್ರೆಯ ನಿರ್ದೇಶಕ ಡಾ ಎಂ.ದಯಾನಂದ್ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕೋವಿಡ್-19 ಸಂದರ್ಭದಲ್ಲಿ ಹೃದಯ ಸಮಸ್ಯೆಯ ಪರಿಹಾರಗಳ ಬಗ್ಗೆ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತಾ ವಿಶ್ವ ಹೃದಯ ದಿನಾಚರಣೆಯ ಮಹತ್ವವನ್ನು ಡಾ.ವಬಿನಯ್ ಕುಮಾರ್, ಡಾ.ಮಂಜಪ್ಪ ಸವಿವರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆಎಸ್ ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಸವನಗೌಡಪ್ಪ, ವೈದ್ಯಕೀಯ ಅಧೀಕ್ಷಕ ಡಾ.ಗುರುಸ್ವಾಮಿ ಎಂ, ಉಪನಿರ್ದೇಶಕ ಡಾ.ಮಂಜುನಾಥ, ಡಾ.ಶ್ಯಾಮ್ ಪ್ರಸಾದ್ ಶೆಟ್ಟಿ, ಮುಖ್ಯಅಭಿಯಂತರರು ಬೆನ್ನೂರ್, ಡಾ.ಶಾಂತಮಲ್ಲಪ್ಪ,ಡಾ.ಸುನೀಲ್ ಕುಮಾರ್, ಡಾ.ಮಂಜಪ್ಪ, ಡಾ.ಸುಜಯ್, ಡಾ.ಗಣೇಶ್ ಡಾ.ಗುರುಪ್ರಸಾದ್, ಡಾ.ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: