ಪ್ರಮುಖ ಸುದ್ದಿ

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೂ ಕೊರೋನಾ ಪಾಸಿಟಿವ್

ದೇಶ(ನವದೆಹಲಿ)ಸೆ.30:- ದೇಶದಲ್ಲಿ ಕೊರೊನಾ ವೈರಸ್ ಮಹಾಮಾರಿ ಹೆಚ್ಚುತ್ತಲೇ ಇದ್ದು ಇದೀಗ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ರುಟೀನ್ ಟೆಸ್ಟ್ ವೇಳೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ.
ಈ ಕುರಿತಾದ ಮಾಹಿತಿಯನ್ನು ಉಪರಾಷ್ಟ್ರಪತಿಗಳ ಅಧಿಕೃತ ಟ್ವೀಟರ್ ನಲ್ಲಿ ಬರೆಯಲಾಗಿದೆ.
ರುಟೀನ್ ಕೊರೊನಾ ಟೆಸ್ಟ್ ಗೆ ಒಳಗಾಗಿದ್ದು, ಇದರಲ್ಲಿ ಕೊವಿಡ್ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಆದರೆ, ಅವರಲ್ಲಿ ಇದುವರೆಗೆ ಯಾವುದೇ ಕೊವಿಡ್ ಲಕ್ಷಣಗಳು ಕಂಡುಬಂದಿಲ್ಲ ಹಾಗೂ ಅವರ ಆರೋಗ್ಯ ಸಂಪೂರ್ಣ ಸ್ಥಿರವಾಗಿದೆ. ಸೆಲ್ಫ್ ಐಸೊಲೆಶನ್ ಗಾಗಿ ಕ್ವಾರೆಂಟೈನ್ ಮಾಡಲಾಗಿದೆ ಎಂದಿದ್ದಾರೆ. ಇನ್ನೊಂದೆಡೆ ಅವರ ಪತ್ನಿ ಉಷಾ ನಾಯ್ಡು ಅವರ ಕೊರೊನಾ ವರದಿ ನೆಗೆಟಿವ್ ಬಂದಿದೆ.(ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: