ಮೈಸೂರು

ಮೈಸೂರು ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್ ಫಾರ್ಮ್ ಟಿಕೆಟ್ ದರ ಹೆಚ್ಚಳ : 50ರೂ ನಿಗದಿ; ಡಿ.31ರವರೆಗೆ ಅನ್ವಯ

ಮೈಸೂರು,ಸೆ.30:- ಕೋವಿಡ್ 19 ಸಾಂಕ್ರಾಮಿಕವು ಪೂರ್ತಿ ದೇಶದಲ್ಲಿ ಹೆಚ್ಚು ವೇಗವಾಗಿ ಹರಡುತ್ತಿರುವ ಕಾರಣ ಸಾರ್ವಜನಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಮೈಸೂರು ನಿಲ್ದಾಣದಲ್ಲಿ ಪ್ಲಾಟ್ಫಾರ್ಮ್ ಟಿಕೆಟ್ ಶುಲ್ಕವನ್ನು ತಕ್ಷಣದಿಂದ ಜಾರಿಗೆ ಬರುವಂತೆ 31.12.2020 ರವರೆಗೆ 50 ರೂ.ಕ್ಕೆ ಹೆಚ್ಚಿಸಲಾಗಿದೆ. ಪ್ಲಾಟ್ಫಾರ್ಮ್ ಟಿಕೆಟ್ನ ದರ ಹೆಚ್ಚಳವು ಸಾರ್ವಜನಿಕರ ವೃಥಾ ಪ್ಲಾಟ್ಫಾರ್ಮ್ ಪ್ರವೇಶವನ್ನು ನಿರ್ಬಂಧಿಸುವ ಉದ್ದೇಶವನ್ನು ಹೊಂದಿದೆ ಮತ್ತು ಇದರಿಂದಾಗಿ ಪ್ಲಾಟ್ಫಾರ್ಮ್ ಗಳಲ್ಲಿ ಜನದಟ್ಟಣೆ ತಪ್ಪಿಸುವುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮೈಸೂರು ನಿಲ್ದಾನದಿಂದ ಹೊರಡುವ ಮತ್ತು ಮೈಸೂರು ನಿಲ್ದಾನದ ಮೂಲಕ ಸಂಚರಿಸುವ ವಿಶೇಷ ರೈಲುಗಳ ವಿವರ ಹೀಗಿದೆ
ರೈಲು ಸಂಖ್ಯೆ 06503/06504 ಕೆ.ಎಸ್.ಆರ್. ಬೆಂಗಳೂರು – ಮೈಸೂರು – ಕೆ.ಎಸ್.ಆರ್. ಬೆಂಗಳೂರು (ದೈನಂದಿನ) ವಿಶೇಷ ಎಕ್ಸ್ಪ್ರೆಸ್
ರೈಲು ಸಂಖ್ಯೆ 06539/06540 ಕೆಎಸ್.ಆರ್. ಬೆಂಗಳೂರು – ಮೈಸೂರು – ಕೆ.ಎಸ್.ಆರ್. ಬೆಂಗಳೂರು (ದೈನಂದಿನ) ವಿಶೇಷ ಎಕ್ಸ್ಪ್ರೆಸ್
ರೈಲು ಸಂಖ್ಯೆ 06535/06536 ಮೈಸೂರು – ಸೋಲಾಪುರ – ಮೈಸೂರು (ದೈನಂದಿನ) ವಿಶೇಷ ಎಕ್ಸ್ಪ್ರೆಸ್
ರೈಲು ಸಂಖ್ಯೆ 06581/06582 ಹುಬ್ಬಳ್ಳಿ – ಮೈಸೂರು – ಹುಬ್ಬಳ್ಳಿ (ದೈನಂದಿನ) ವಿಶೇಷ ಎಕ್ಸ್ಪ್ರೆಸ್
ರೈಲು ಸಂಖ್ಯೆ 02975/02976 ಮೈಸೂರು – ಜೈಪುರ – ಮೈಸೂರು (ವಾರದಲ್ಲಿ ಎರಡು ದಿನ) ಸೂಪರ್ಫಾಸ್ಟ್ ವಿಶೇಷ ಎಕ್ಸ್ಪ್ರೆಸ್
ರೈಲು ಸಂಖ್ಯೆ 06517/06518 ಕೆ.ಎಸ್.ಆರ್. ಬೆಂಗಳೂರು – ಮಂಗಳೂರು ಕೇಂದ್ರ – ಕೆ.ಎಸ್.ಆರ್. ಬೆಂಗಳೂರು (ವಾರದಲ್ಲಿ ಮೂರು ದಿನ) ವಿಶೇಷ ಎಕ್ಸ್ಪ್ರೆಸ್ (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: