ಮೈಸೂರು

ಜನರಿಗೆ ದಂಡದ ಜೊತೆ ಮಾಸ್ಕ್ ನೀಡುವಂತೆ ಮನವಿ

ಮೈಸೂರು,ಸೆ.30:- ಮಾಸ್ಕ್ ಧರಿಸದ ಜನರಿಗೆ ದಂಡ ವಿಧಿಸಿ ಮಾಸ್ಕ್ ಇಲ್ಲದೆ ಅವರನ್ನು ಕಳುಹಿಸುವ ಬದಲು ಅವರಿಗೆ ಮಾಸ್ಕ್ ನೀಡುವುದರ ಮೂಲಕ ಜಾಗೃತಿ ಮೂಡಿಸುವಲ್ಲಿ ಮುಂದಾಗಬೇಕೆಂದು ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಕೊರೋನಾ ನಿಯಂತ್ರಣಕ್ಕೆ ತರಲು ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಕ್ರಮ ಸರಿಯಾಗಿದೆಯಾದರೂ ಕೇವಲ ಅದರಿಂದ ದಂಡದ ಮೊತ್ತ ಪಡೆಯುವ ಬದಲು ಅವರ ಆರೋಗ್ಯ ಕಾಳಜಿಗೆ ಮಾಸ್ಕ್ ನೀಡುವುದು ಅಗತ್ಯ. ವಾಹನಗಳಲ್ಲಿ ಸಾಗುವವರು ಒಮ್ಮೊಮ್ಮೆ ಸೋಂಕಿತರಲ್ಲಿ ದಂಡದ ಹಣ ನೀಡಿ ಮುಂದೆ ಸಾಗುವಾಗ ಸೋಂಕು ಇತರರಿಗೆ ಹರಡುವ ಸಾಧ್ಯತೆ ಹೆಚ್ಚು ಇರುತ್ತದೆ. ಆದ್ದರಿಂದ ದಂಡದ ಜೊತೆ ಮಾಸ್ಕ್ ಸಹ ನೀಡಿದರೆ ಈ ಕೋವಿಡ್ ಸಂದರ್ಭದಲ್ಲಿ ಕಾರ್ಮಿಕರಿಗೆ ಮತ್ತು ಅನಕ್ಷರಸ್ಥ ಜನರಿಗೆ ಉಪಯೋಗವಾಗಲಿದೆ ಎಂದು ಅವರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: