ಮೈಸೂರು

ನಾಳೆ ಗಜಪಯಣ : ಸಿದ್ಧತೆ ನಡೆಸಿದ ಅರಣ್ಯ ಇಲಾಖೆ; ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ

ಮೈಸೂರು,ಸೆ.30:- ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ನಾಳೆ ವೀರನಹೊಸಳ್ಳಿಯಿಂದ ಬೆಳಿಗ್ಗೆ ಗಜಪಯಣ ಮೈಸೂರಿಗೆ ಹೊರಡಲಿದ್ದು, ನಾಳಿನ ಗಜಪಯಣಕ್ಕೆ ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.
ಆನೆಗಳ ಅಲಂಕಾರಿಕ ವಸ್ತುಗಳನ್ನು ಸಿಬ್ಬಂದಿಗಳು ಜೋಡಿಸಿಟ್ಟುಕೊಳ್ಳುತ್ತಿದ್ದಾರೆ. ಅಲಂಕಾರಿಕ ವಸ್ತುಗಳಾದ ಗಾದಿ, ಆನೆ ದಂತಕ್ಕೆ ಹಾಕುವ ಸಿಂಗೋಟಿ, ಆನೆಗಳ ಹಣೆಪಟ್ಟಿ, ಮಾವುತರು ಮತ್ತು ಕಾವಾಡಿಗಳ ಸಮವಸ್ತ್ರಗಳನ್ನು ಜೋಡಿಸಿಕೊಳ್ಳುತ್ತಿದ್ದಾರೆ. ಮೈಸೂರಿನ ಅರಣ್ಯ ಭವನದಲ್ಲಿ ಸಿದ್ಧತೆ ನಡೆದಿದ್ದು, ಆನೆಗಳು ಅರಣ್ಯ ಭವನದಲ್ಲಿ ತಂಗಲು ಸ್ವಚ್ಛತಾ ಕಾರ್ಯ ನಡೆದಿದೆ. ನಾಳಿನ ಗಜಪಯಣ ಕಾರ್ಯಕ್ರಮಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ನಾಳೆ 10 ಗಂಟೆಗೆ ಸಾಂಪ್ರದಾಯಿಕ ಪೂಜೆ ನಡೆಯಲಿದೆ. ಪೂಜೆ ಕಾರ್ಯಕ್ರಮದಲ್ಲಿ ಕೇವಲ ಅಧಿಕಾರಿಗಳಷ್ಟೇ ಭಾಗಿಯಾಗಲಿದ್ದಾರೆ. ಈ ಬಾರಿ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ ಎಂದು ಡಿಸಿಎಫ್ ಅಲೆಗ್ಸಾಂಡರ್ ಮಾಹಿತಿ ನೀಡಿದರು.
ನಾಳೆ ಮೈಸೂರಿನ ಅರಣ್ಯ ಭವನಕ್ಕೆ ದಸರಾ ಆನೆಗಳು ಬಂದಿಳಿಯಲಿದ್ದು, ಅಭಿಮನ್ಯು ಅಂಡ್ ಟೀಮ್ ವಾಸ್ತವ್ಯಕ್ಕೆ ಸಿದ್ದತೆ ನಡೆದಿದೆದೆ. ಅರಣ್ಯ ಭವನದ ಅಂಗಳದಲ್ಲಿ ಸ್ವಚ್ಛತಾ ಕಾರ್ಯ ನಡೆದಿದ್ದು, ಜೆಸಿಬಿ ಬಳಸಿ ಸಿಬ್ಬಂದಿಗಳು ಸ್ವಚ್ಛಗೊಳಿಸುತ್ತಿದ್ದಾರೆ. ಒಂದು ದಿನ ಅರಣ್ಯ ಭವನ ಅಂಗಳದಲ್ಲಿ ಅಭಿಮನ್ಯು ಅಂಡ್ ಟೀಮ್ ತಂಗಲಿದೆ. ನಾಳೆ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಐದು ಆನೆಗಳು ಮೈಸೂರಿನ ಅರಣ್ಯ ಭವನ ಅಂಗಳಕ್ಕೆ ಬಂದಿಳಿಯಲಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಗಳ ಬರುವಿಕೆಗೆ ಕಾಯುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: