ಪ್ರಮುಖ ಸುದ್ದಿಮೈಸೂರು

ಸುತ್ತೂರು ಮಠಕ್ಕೆ ಡಾ.ಜಿ.ಪರಮೇಶ್ವರ ಭೇಟಿ

ಗೃಹಸಚಿವ ಡಾ.ಜಿ.ಪರಮೇಶ್ವರ ಬುಧವಾರ ಸುತ್ತೂರು ಮಠಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಆಶೀರ್ವಾದ  ಪಡೆದರು.

ಬಳಿಕ ಮಾತನಾಡಿದ ಅವರು ಸುತ್ತೂರು ಮಠದ ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೇವೆ.ಅದಕ್ಕೂ ಹೊರತಾಗಿ ಏನೂ ಇಲ್ಲ.  ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಭಾಗದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಸ್ವಾಮೀಜಿಗಳಿಗೆ ಇಲ್ಲಿನ ಸತ್ಯಾಸತ್ಯತೆಯ ಅರಿವು ಇದೆ. ಅದರಿಂದ  ಆಶೀರ್ವಾದ ಕೇಳಿದ್ದೇವೆ. ನಮಗದು ಸಿಕ್ಕಿದೆ ಎಂದರು.

ಸುರೇಶ್ ಕುಮಾರ್ ಕೊಟ್ಟಿಗೆ ವಾಸ್ತವ್ಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಕೊಟ್ಟಿಗೆ ರಾಜಕೀಯ  ಅಂತ ನಾನು ಎಲ್ಲೂ ಹೇಳಿಲ್ಲ. ಅವರು ಯಾಕೆ ಹಾಗೇ ಹೇಳಿದರೋ ಗೊತ್ತಿಲ್ಲ. ಅವರು ಕೊಟ್ಟಿಗೆಯಲ್ಲಾದರೂ ರಾಜಕೀಯ ಮಾಡಲಿ, ಬಾತ್ ರೂಂನಲ್ಲಾದರೂ ರಾಜಕೀಯ ಮಾಡಲಿ ಅದರಿಂದ  ನಮಗೇನು ಎಂದು ಪ್ರಶ್ನಿಸಿದರು.

ಈ ಸಂದರ್ಭ  ಶಾಸಕ ಮುನಿರತ್ನ, ಭೈರತಿ ಬಸವರಾಜು, ಸೋಮಶೇಖರ್ ಹಾಗೂ ಶಾಸಕ ವಾಸು ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: