ಮೈಸೂರು

ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮಿಜೀ ಶತಮಾನದ ಮಹಾನ್ ಚೇತನ : ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ

ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ  ಅಂತರಾಷ್ಟ್ರೀಯ ಗುಣಮಟ್ಟದ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಮೈಸೂರನ್ನು ಜಾಗತಿಕ ಮಟ್ಟದಲ್ಲಿ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕೇಂದ್ರವಾಗಿ ಗುರುತಿಸಲ್ಪಡುವಂತೆ ಮಾಡಿದ ಮಹಾನ್ ಚೇತನ

-ಡಾ.ಶರತ್ ಕುಮಾರ್. ಅಧ್ಯಕ್ಷ, ಕರ್ನಾಟಕ ವೈದ್ಯ ಪರಿಷತ್.

ಸುತ್ತೂರು ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮಿಜೀ ದೂರದೃಷ್ಟಿಯುಳ್ಳ ಮಹಾಪುರುಷರಾಗಿದ್ದರು.  12ನೇ ಶತಮಾನದ ಬಸವಣ್ಣನವರ ಜ್ಞಾನ ದಾಸೋಹ, ವಿದ್ಯಾ ದಾಸೋಹ ಹಾಗೂ ಅನ್ನದಾಸೋಹ ಪರಿಕಲ್ಪನೆಗೆ ಪ್ರೇರಿತರಾಗಿ ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಶತಮಾನದ ಮಹಾನ್ ಚೇತನ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ತಿಳಿಸಿದರು.

ಅವರು ಸೆ.29ರಂದು ಬೆಳಿಗ್ಗೆ ನಗರದ ದಿ.ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್  ಅಲ್ಲಿ ಬೆಂಗಳೂರಿನ ಕರ್ನಾಟಕ ವೈದ್ಯ ಸಾಹಿತ್ಯ ಪರಿಷತ್ ಹಾಗೂ ಮೈಸೂರಿನ ಅರಸು ಜಾಗೃತಿ ಅಕಾಡೆಮಿ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಡಾ.ಅನಸೂಯ ಕೆಂಪನಹಳ್ಳಿ ವಿರಚಿತ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಜೀವನ ಸಾಧನೆಗಳ ಪಕ್ಷಿನೋಟದ ‘ವಿಶ್ವಕುಟುಂಬಿ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿ ಪ್ರಸ್ತುತ ಡಾ.ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಗುರುವಿಗೆ ತಕ್ಕ ಶಿಷ್ಯರಾಗಿದ್ದು ಅವರ ಕನಸನ್ನು ಅತ್ಯಂತ ಯಶಸ್ವಿಯಾಗಿ ಈಡೇರಿಸಿದ್ದಾರೆ. ವಿಶ್ವದಾದ್ಯಂತ ಶ್ರೀಮಠದ ಮೂರು ನೂರು ವಿದ್ಯಾ ಸಂಸ್ಥೆಗಳು ಹಾಗೂ ಡೀಮ್ಡ್ ಯುನಿವರ್ಸಿಟಿ ಕಾರ್ಯನಿರ್ವಹಿಸುತ್ತಿದೆ. ಮಠದ ವಿದ್ಯಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ವ್ಯಕ್ತಿ ಕಲ್ಯಾಣದಿಂದ ವಿಶ್ವ ಕಲ್ಯಾಣ ಎಂದು ನಂಬಿದ್ದವರು ಅವರ ಶತಮಾನೋತ್ಸವ ಸಂದರ್ಭದಲ್ಲಿ ಕೃತಿ ಬಿಡುಗಡೆಗೊಳ್ಳುತ್ತಿರುವುದು ಸಂತಸ ತಂದಿದೆ ಎಂದು ಮಠ ಮಾನ್ಯಗಳು ಮಾಡುವ ಕೆಲಸ ಸಾರ್ವಜನಿಕರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ಕೃತಿ ಬಗ್ಗೆ ಮಾತನಾಡಿದ ಹಿರಿಯ ಸಾಹಿತಿ ಪ್ರೊ.ಭೈರವಮೂರ್ತಿ ಜಗತ್ತಿನ ಎಲ್ಲಾ ಭಾಷೆಗಳಿಗೂ ‘ಗುರುಪರಂಪರೆಯ’ ಕೃತಿಗಳು ಅನುವಾದವಾಗಬೇಕು, ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಪರಂಪರೆ ಹೊಂದಿರುವ ಸುತ್ತೂರು ಧಾರ್ಮಿಕ ರಾಜಧಾನಿ, ಶ್ರೀಶಿವರಾತ್ರಿ ರಾಜೇಂದ್ರ ಶ್ರೀಗಳದು ಮಾತೃ ಹೃದಯದ ದಿವ್ಯ ಚೇತನ ಶ್ರೀಕ್ಷೇತ್ರ ಸುತ್ತೂರಿನಲ್ಲಿ 26 ಶಿಲಾ ಶಾಸನಗಳಿದ್ದು ಅದರಲ್ಲಿ ಎರಡು ಹತ್ತನೇ ಶತಮಾನದವೆಂದು ಇತಿಹಾಸ ತಜ್ಞರು ತಿಳಿಸಿದ್ದಾರೆ ಸರ್ವ ಧರ್ಮ ಸಮನ್ವಯತೆಯನ್ನು ಕಾರ್ಯರೂಪದಲ್ಲಿ ತಂದು ಸಾಮೂಹಿಕ ವಿವಾಹ, ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಿದ್ದರು ಎಂದು ತಿಳಿಸಿದರು.

ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ನಿವೃತ್ತ ಸಹಾಯಕ ಆಯುಕ್ತ ಎ.ಸಿ.ಲಕ್ಷ್ಮಣ್, ಮಂಗಳೂರು ವಿವಿಯ ವಿಶ್ರಾಂತ ಪ್ರೊ.ಒಡೆಯರ್ ಡಿ.ಹೆಗಡೆ, ಕರ್ನಾಟಕ ನಾಟಕ ಅಕಾಡೆಮಿ ವಿಶ್ರಾಂತ ರಿಜಿಸ್ಟ್ರಾರ್ ಎ.ಎಸ್.ನಾಗರಾಜ್. ಸ್ತ್ರೀಶಕ್ತಿ ಮಹಿಳಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷೆ ಮಂಗಳ ಸತ್ಯನ್, ಮೈಸೂರು ವಿವಿಯ ಸಹಾಯಕ ಪ್ರಾಧ್ಯಾಪಕಿ ಡಾ.ಎಸ್.ಎಸ್.ಮಾಲಿನಿ, ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಹಾಗೂ ಅರಸು ಮಂಡಳಿ ಮಾಜಿ ಅಧ್ಯಕ್ಷ ನವೀನ್ ರಾಜೇ ಅರಸ್ ಅವರಿಗೆ ‘ಧ್ವನಿ ಇಲ್ಲದವರಿಗೆ ಧ್ವನಿ ಕೊಟ್ಟ ಧಣಿ ಡಿ.ದೇವರಾಜೇಅರಸ್ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ದಿ.ಇನ್ಸ್ಟಿಟೂಷನ್ ಆಫ್ ಇಂಜಿನಿಯರ್ಸ್ ಅಧ್ಯಕ್ಷ ಡಾ.ಟಿ.ಹೆಚ್.ಉದಯಶಂಕರ್ ಅಧ್ಯಕ್ಷತೆ ವಹಿಸಿದ್ದರು.  ಸಂಧ್ಯಾ ಸುರಕ್ಷ ಟ್ರಸ್ಟ್ ಅಧ್ಯಕ್ಷ ಬಿ.ಆರ್.ನಟರಾಜ ಜೋಯಿಸ್, ವಿಶ್ವಕುಟುಂಬಿ ಕೃತಿ ಲೇಖಕಿ ಡಾ.ಅನಸೂಯ ಕೆಂಪನಹಳ್ಳಿ ಹಾಗೂ ಅರಸು ಚಿಂತಕರ ಚಾವಡಿ ಅಧ್ಯಕ್ಷ ಕೆಂಪರಾಜೇ ಅರಸ್ ಉಪಸ್ಥಿತರಿದ್ದರು.

Leave a Reply

comments

Related Articles

error: