ಮೈಸೂರು

ಕಳಲೆ ಕೇಶವಮೂರ್ತಿ ಪರ ಮತಯಾಚಿಸಿದ ಟಿ.ಬಿ.ಜಯಚಂದ್ರ

ಕಾನೂನು ಸಚಿವ ಟಿ.ಬಿ.ಜಯಚಂದ್ರ ಹಾಗೂ ಕೆ.ಪಿ.ಸಿ.ಸಿ.ಕಾನೂನು ವಿಭಾಗದ ಅಧ್ಯಕ್ಷ ಸಿ.ಧನಂಜಯ  ನಂಜನಗೂಡು ಹೆಜ್ಜಿಗೆ ಲಿಂಗಣ್ಣನವರ ವೃತ್ತದಲ್ಲಿರುವ ಚಿಂತಾಮಣಿ ಗಣಪತಿ ದೇವಸ್ಥಾನದಿಂದ ನಂಜನಗೂಡು ಕ್ಷೇತ್ರದ ವಿಧಾನ ಸಭಾ ಉಪಚುನಾವಣೆಯ ಅಭ್ಯರ್ಥಿ ಕಳಲೆ ಕೇಶವಮೂರ್ತಿಯವರ ಪರ ಮತಯಾಚನೆಗೆ ಆಗಮಿಸಿ ಪಾದಯಾತ್ರೆ ಮಾಡುತ್ತಾ ಅಂಗಡಿ ಬೀದಿಯ ಮಾಲೀಕರಿಗೆ ಕರಪತ್ರ ನೀಡಿ ಮತಯಾಚಿಸಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಚಾರ ಕಛೇರಿಗೆ ಭೇಟಿ ನೀಡಿ, ಬಾಬು ಜಗಜೀವನರಾಂ ರವರ 110ನೇ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಮಾಡಿದರು. ಪುಣ್ಯಸ್ಮರಣೆ ಮಾಡುತ್ತಾ ಬಾಬು ಜಗಜೀವನರಾಂ ರವರು ದೇಶದ ದೀನ ದಲಿತರ ಪಾಲಿಗೆ ದೈವ ಸಮಾನವಾಗಿ, ಮುಖಂಡರಾಗಿ, ಸ್ವಾತಂತ್ರ್ಯ ಸೇನಾನಿಯಾಗಿ, ಹಸಿರು ಹರಿಕಾರರಾಗಿ,ಯೂನಿಯನ್ ಸಚಿವರಾಗಿ, ಬಿಹಾರಿನ ಬರ ಪರಿಸ್ಥಿತಿಯಲ್ಲಿ ದೇಶವು ಆಹಾರ ಭದ್ರತೆ ಕಾಣದೆ ಇದ್ದ ಸಂದರ್ಭದಲ್ಲಿ  ದೇಶದ ಜನತೆಗೆ ಆಹಾರ ಭದ್ರತೆಗಾಗಿ ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ. ಅಂಥಹವರ ಜನ್ಮ ದಿನವನ್ನು ಆಚರಿಸುತ್ತಿರುವುದು ನಮ್ಮೆಲ್ಲರ ಪುಣ್ಯ ಎಂದು ತಿಳಿಸಿದರು.  ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ. ಕಾನೂನಿನ ವಿಭಾಗದ ಅಧ್ಯಕ್ಷ ಸಿ.ಎಂ.ಧನಂಜಯ, ಮುಖಂಡರಾದ ಮರಿಗೌಡ, ಮೈ.ಜಿ.ಪ್ಲಾನಿಂಗ್ ಕಮಿಟಿ, ಕೆ.ಎಸ್.ಶೌಖತ್ ಪಾಶ, .ಮಾಜಿ ಮೇಯರ್ ಹೆಚ್.ಎನ್.ಶ್ರೀಕಂಠಯ್ಯ, ಸುನೀತಾಸುರೇಶ್, ವಕೀಲ ಸಂಘದ ಅಧ್ಯಕ್ಷ ರಾಚಪ್ಪ, ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: