ದೇಶಪ್ರಮುಖ ಸುದ್ದಿ

ಉರಿ ದಾಳಿಗೆ ಪ್ರತೀಕಾರ ಆರಂಭಿಸಿದ ಭಾರತ: 37ಕ್ಕೂ ಹೆಚ್ಚು ಉಗ್ರರ ಹತ್ಯೆ

ನವದೆಹಲಿ: ಗಡಿ ನಿಯಂತ್ರಣ ರೇಖೆ ಬಳಿ ಅವಿತು ಕುಳಿತಿದ್ದ ಉಗ್ರರ ಮೇಲೆ ಕಳೆದ ಮಧ್ಯರಾತ್ರಿ ದಾಳಿ ನಡೆಸಿ ಹಲವು ಉಗ್ರರನ್ನು ಸದೆಬಡೆಯಲಾಗಿದೆ ಎಂದು ಸೇನಾ ಮುಖ್ಯಸ್ಥ ರಣ್‍ಬೀರ್‍ ಸಿಂಗ್‍ ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನಕ್ಕೆ ಸೇರಿದ ಜಾಗವಾದ ಬೆಟ್ಟ, ಅರಣ್ಯ, ಪರ್ವತದಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಲಾಗಿತ್ತು. ಭಾರತೀಯ ಸೈನಿಕರಿಗೆ ಯಾವುದೇ ಗಾಯಗಳಾಗಿಲ್ಲ. ಸುಮಾರು 37ಕ್ಕೂ ಹೆಚ್ಚು ಉಗ್ರರನ್ನು ಸಾಯಿಸಲಾಗಿದ್ದು, ಅವರೊಂದಿಗಿದ್ದ ಹಲವರಿಗೆ ಗಾಯಗಳಾಗಿವೆ. ಸೇನೆಗೆ ದೊರೆತ ಖಚಿತ ಮಾಹಿತಿ ಮೇರೆಗೆ ನಿನ್ನೆ ರಾತ್ರಿ ಕಾರ್ಯಾಚರಣೆ ನಡೆಸಲಾಗಿತ್ತು. ಭಾರತದ ಮೇಲೆ ದಾಳಿ ನಡೆಸಲು ಹೊಂಚು ಹಾಕಿ ಕುಳಿತಿದ್ದ ಉಗ್ರರ ಮೇಲೆ ದಾಳಿ ನಡೆಸಲಾಗಿತ್ತು. ಭಾರತ ಯಾವುದೇ ದೇಶ ವಿರೋಧಿ ಘಟನೆಗಳನ್ನು ಸಹಿಸುವುದಿಲ್ಲ. ಮತ್ತೆ ಅಕ್ರಮ ನುಸುಳುವಿಕೆ ನಡೆದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ರಣ್‍ಬೀರ್‍ ಸಿಂಗ್‍ ಉಗ್ರ ಎಚ್ಚರಿಕೆ ನೀಡಿದ್ದಾರೆ.

ಭಯೋತ್ಪಾದಕರ ಎಂಟು ತಾಣಗಳ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದು, ಪ್ರತಿಯೊಂದು ಶಿಬಿರದಲ್ಲೂ 30ರಿಂದ 40 ಮಂದಿ ಉಗ್ರರಿದ್ದರು. 25 ಕಮಾಂಡೋಗಳಿಂದ ಕಾರ್ಯಾಚರಣೆ ನಡೆದಿತ್ತು, ಡ್ರೋಣ್‍ ಮೂಲಕ ಸಂಪೂರ್ಣ ಚಿತ್ರೀಕರಣ ನಡೆಸಲಾಗಿದೆ. ಕಾರ್ಯಾಚರಣೆಯಲ್ಲಿ ಪಾಕಿಸ್ತಾನಿ 9 ಸೈನಿಕರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿಯೂ ಸಿಕ್ಕಿದೆ. ಕಾರ್ಯಾಚರಣೆಗೂ ಮುನ್ನ ಸೇನಾಧಿಕಾರಿಗಳು ಉರಿ ಸೆಕ್ಟರ್‍ಗೆ ತೆರಳಿದ್ದರು. ಅಲ್ಲದೇ, ನಿರಂತರವಾಗಿ ಪ್ರಧಾನಿ ಮೋದಿಯೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ದಾಳಿ ಹಿನ್ನೆಲೆಯಲ್ಲಿ ರಾಷ್ಟ್ರಪತಿ, ಉಪ ರಾಷ್ಟ್ರಪತಿಗಳಿಗೆ ಮೋದಿ ವರದಿ ನೀಡಿದ್ದಾರೆ

ಉಗ್ರರ ಹತ್ಯೆ ನಡೆಸಿರುವ ಕ್ರಮವನ್ನು ಸ್ವಾಗತಿಸಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೇನೆಗೆ ಧನ್ಯವಾದ ಸಲ್ಲಿಸಿದ್ದಾರೆ. ದೇಶದ ಭದ್ರತೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ತಿಳಿಸಿದ್ದಾರೆ. ನರೇಂದ್ರ ಮೋದಿ ಕ್ರಮಕ್ಕೆ ಅಭಿನಂದನೆ ತಿಳಿಸಿದ್ದಾರೆ.

 

Leave a Reply

comments

Related Articles

error: