ಮೈಸೂರು

ಮೈಸೂರು ರೈಲು ವಸ್ತುಸಂಗ್ರಹಾಲಯದಲ್ಲಿ ನಿಂತಿದ್ದಾರೆ ಕಾಮನ್ ಮ್ಯಾನ್!

ಮೈಸೂರು,ಅ.1:- ಚೌಕಳಿಯ ಕೋಟ್ ಧರಿಸಿ ನಿಂತಿರುವ ವ್ಯಕ್ತಿಯೊಬ್ಬರು ರೈಲು ಸಂಗ್ರಹಾಲಯದಲ್ಲಿ ಕಂಡು ಬಂದಿದ್ದಾರೆ. ಅವರು ಬೇರೆ ಯಾರೂ ಅಲ್ಲ, ಎಲ್ಲರಿಗೂ ಹೆಚ್ಚು ಇಷ್ಟವಾಗುವ ಪ್ರಸಿದ್ಧ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ .
ಮೈಸೂರು ವಿಭಾಗವು ವ್ಯಂಗ್ಯ ಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅವರ ಶಿಲ್ಪವನ್ನು ರೈಲು ಸಂಗ್ರಹಾಲಯದ ಆವರಣದಲ್ಲಿ ಸ್ಥಾಪಿಸಿದೆ. ಭಾರತದಲ್ಲಿ ರೈಲ್ವೆಯೆಂದರೆ ಸಾಮಾನ್ಯ ಮನುಷ್ಯನ ಆಶಯ ಮತ್ತು ಆಕಾಂಕ್ಷೆಗಳಿಗಾಗಿಯೇ ಇದೆ. ಈ ಅಪ್ರತಿಮ ಶಿಲ್ಪವನ್ನು ರಚಿಸುವ ಮೂಲಕ ಸಾಮಾನ್ಯ ಜನರಿಗೆ ರೈಲ್ವೆಯ ಸಂಪರ್ಕವನ್ನು ಇನ್ನಷ್ಟು ಬೆಸೆಯುವ ಒಂದು ಮಾರ್ಗವಾಗಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಅಪರ್ಣ ಗರ್ಗ್ ರವರು ವ್ಯಾಖ್ಯಾನಿಸಿದ್ದಾರೆ.
ದಂತಕತೆಯಾದ ಆರ್.ಕೆ. ಲಕ್ಷ್ಮಣ್ ರವರು ಮೈಸೂರಿನಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ‘ಕಾಮನ್ ಮ್ಯಾನ್’ ಆಗಿ 1951 ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ನಗರದಿಂದ ಬಂದ ಸೃಷ್ಟಿಕರ್ತನ ಸೃಜನಶೀಲ ಪ್ರತಿಭೆಗೆ ಇದು ಒಂದು ಸಣ್ಣ ಗೌರವ. ರೂಪಾಂತರಗೊಂಡ ರೈಲು ವಸ್ತುಸಂಗ್ರಹಾಲಯಕ್ಕೆ ಮತ್ತೊಂದು ಅನನ್ಯ ಆಕರ್ಷಣೆಯಾಗಲಿದೆ.
ಶಿಲ್ಪವನ್ನು ಮೈಸೂರು ಮೂಲದ ಅರುಣ್ ಯೋಗಿರಾಜ್ ಎಂಬ ಶಿಲ್ಪಕಲಾ ಕಲಾವಿದ ನಿರ್ಮಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: