ದೇಶಪ್ರಮುಖ ಸುದ್ದಿ

ಉತ್ತರಪ್ರದೇಶದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ, ಯುವತಿ ಸಾವು

ಬಲರಾಂಪುರ,(ಉತ್ತರಪ್ರದೇಶ),ಅ.1-ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಘಟನೆ ಮಾಸುವ ಮುನ್ನವೇ ಮತ್ತೊಂದು ಸಾಮಾಹಿಕ ಅತ್ಯಾಚಾರ ಪ್ರಕರಣ ವರದಿಯಾಗಿದೆ.

ಉತ್ತರಪ್ರದೇಶದ ಬಲರಾಂಪುರದಲ್ಲಿ 22 ವರ್ಷದ ದಲಿತ ಯುವತಿ ದುಷ್ಕರ್ಮಿಗಳಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟಿದ್ದಾಳೆ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿ ಮಂಗಳವಾರ ಮನೆಗೆ ಮರಳುವಾಗ ಇಬ್ಬರು ಪುರುಷರು ಯುವತಿಯ ಮೇಲೆ ಎರಗಿ ಅತ್ಯಾಚಾರ ಗೈದಿದ್ದಾರೆ.

ಗಂಭೀರ ಸ್ಥಿತಿಯಲ್ಲಿ ಈಕೆ ಮನೆ ಸೇರಿದ್ದಳು. ಕುಟುಂಬದವರು ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಯುವತಿ ಮೃತಪಟ್ಟಿದ್ದಾಳೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ದೇವ್‌ ರಂಜನ್‌ ವರ್ಮ ತಿಳಿಸಿದ್ದಾರೆ.

ಆಸ್ಪತ್ರೆಯವರು ಪೊಲೀಸರಿಗೆ ವಿಷಯ ವರದಿ ಮಾಡಿದಾಗ ಯುವತಿಯ ಕುಟುಂಬದವರು ಆಕೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದಳು ಎಂದು ತಿಳಿಸಿದರು. ಆರೋಪಿಗಳಾದ ಶಾಹಿದ್‌ ಮತ್ತು ಸಾಹಿಲ್‌ ಎಂಬುವರನ್ನು ಬಂಧಿಸಲಾಗಿದೆ ಎಂದು ವರ್ಮ ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್‌ ಯಾದವ್‌, ಹತ್ರಾಸ್‌ ಘಟನೆ ಬಳಿಕ ಮತ್ತೊಬ್ಬ ಮಗಳು ಬಲರಾಂಪುರದಲ್ಲಿ ಸಾಮೂಹಿಕ ಅತ್ಯಾಚಾರದಿಂದ ಸಾವಿಗೀಡಾಗಿದ್ದಾಳೆ. ಶ್ರದ್ಧಾಂಜಲಿ! ಎಂದು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: