ಪ್ರಮುಖ ಸುದ್ದಿವಿದೇಶ

ಅಫ್ಗಾನಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ: 9 ಮಂದಿ ದುರ್ಮರಣ

ಕಾಬೂಲ್‌,ಅ.1-ಆತ್ಮಾಹುತಿ ಕಾರು ಬಾಂಬ್ ದಾಳಿಯಲ್ಲಿ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿರುವ ಘಟನೆ ಅಫ್ಗಾನಿಸ್ತಾನದ ದಕ್ಷಿಣ ಭಾಗದಲ್ಲಿ ಮಿಲಿಟರಿ ಚೆಕ್‌ ಪಾಯಿಂಟ್‌ ಬಳಿ ನಡೆದಿದೆ.

ನಹ್ರಿ ಸಾರಾ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಚೆಕ್‌ ಪಾಯಿಂಟ್‌ ಬಳಿ ವಾಹನ ಸಾಗುತ್ತಿದ್ದಾಗ ಘಟನೆ ನಡೆದಿದೆ. ಮೃತಪಟ್ಟವರಲ್ಲಿ ನಾಲ್ವರು ನಾಗರಿಕರೂ ಸೇರಿದ್ದು, ಭದ್ರತಾ ಪಡೆಯ ಮೂವರು ಸಿಬ್ಬಂದಿ ಹಾಗೂ ಮಗು ಗಾಯಗೊಂಡಿದ್ದಾರೆ ಎಂದು ಹೆಲ್ಮಂಡ್‌ ಪ್ರಾಂತ್ಯದ ಗವರ್ನರ್‌ ಅವರ ವಕ್ತಾರ ಒಮರ್‌ ತಿಳಿಸಿದ್ದಾರೆ.

ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಆದರೆ ಹೆಲ್ಮಂಡ್‌ ಪ್ರಾಂತ್ಯದ ಬಹುತೇಕ ಭಾಗ ತಾಲಿಬಾನ್‌ ಉಗ್ರರ ನಿಯಂತ್ರಣದಲ್ಲಿದೆ ಎನ್ನಲಾಗಿದೆ. ಅಫ್ಗನ್‌ ಸರ್ಕಾರದ ಸಂಧಾನಕಾರರು ಮತ್ತು ತಾಲಿಬಾನ್‌ ಸಂಘಟನೆ ನಾಯಕರ ನಡುವೆ ಕತಾರ್‌ನಲ್ಲಿ ಐತಿಹಾಸಿಕ ಮಾತುಕತೆ ನಡೆದಿರುವಾಗಲೇ ಈ ದಾಳಿ ನಡೆದಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: