ದೇಶಪ್ರಮುಖ ಸುದ್ದಿ

ನ್ಯಾಯಾಂಗ ನಿಂದನೆ ಪ್ರಕರಣ: ತೀರ್ಪು ಪ್ರಶ್ನಿಸಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ ಪ್ರಶಾಂತ್ ಭೂಷಣ್ 

ನವದೆಹಲಿ,ಅ.1-ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ನ್ಯಾಯಾಲಯ ವಿಧಿಸಿರುವ ಶಿಕ್ಷೆಯ ಆದೇಶವನ್ನು ಪ್ರಶ್ನಿಸಿ ವಕೀಲ ಪ್ರಶಾಂತ್ ಭೂಷಣ್ ಸುಪ್ರೀಂ ಕೋರ್ಟ್ ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯ ಅನ್ವಯ ಸೆಪ್ಟೆಂಬರ್ 14ರಂದು 1 ರೂ. ದಂಡ ಪಾವತಿಸಿದ್ದ ಪ್ರಶಾಂತ್ ಭೂಷಣ್, ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಈ ಅರ್ಜಿಗಳಲ್ಲಿ ಒಂದು ಅರ್ಜಿ ನ್ಯಾಯಾಂಗ ನಿಂದನೆ ಪ್ರಕರಣದ ವಿರುದ್ಧ ಆಗಸ್ಟ್‌ 14ರಂದು ನೀಡಿದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದೆ. ಇನ್ನೊಂದು ಆಗಸ್ಟ್‌ 31ರಂದು ನೀಡಿದ ಶಿಕ್ಷೆ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದೆ.

ವಕೀಲರಾದ ಕಾಮಿನಿ ಜೈಸ್ವಾಲ್ ಅವರ ಮೂಲಕ ಸಲ್ಲಿಸಲಾದ ಎರಡನೇ ಪರಿಶೀಲನಾ ಅರ್ಜಿಯಲ್ಲಿ ಭೂಷಣ್ ಅವರು, ಈ ವಿಷಯದ ಬಗ್ಗೆ ಮುಕ್ತ ನ್ಯಾಯಾಲಯದಲ್ಲಿ ಮೌಖಿಕ ವಿಚಾರಣೆ ನಡೆಸಬೇಕೆಂದು ಕೋರಿದ್ದಾರೆ. ಈಗ ನೀಡಿರುವ ಆಕ್ಷೇಪಾರ್ಹ ತೀರ್ಪುನ್ನು ಉಲ್ಲೇಖಿಸಿರುವ ಅವರು, ಹೊಸದಾಗಿ ವಿಚಾರಣೆ ನಡೆಸುವಂತೆ ಮರುಪರಿಶೀಲನಾ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಅರ್ಜಿಯಲ್ಲಿ ಎತ್ತಿರುವ ಪ್ರಶ್ನೆಗಳ ವಿಚಾರಣೆ ನಡೆಸಲು ದೊಡ್ಡ ಪೀಠಕ್ಕೆ ವರ್ಗಾಯಿಸಬೇಕು ಎಂದು ಕೋರಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: