ಮೈಸೂರು

ಜೀನಿಯಸ್ ಮೋಟಾರ್ಸ್ ಆರಂಭ


ಮೈಸೂರು,ಅ.1:- ನಗರದ ಹಿನಕಲ್ ರಿಂಗ್ ರಸ್ತೆಯ ಸರಕಾರಿ ಶಾಲೆ ಬಳಿ ಆರಂಭವಾಗಿರುವ ಜೀನಿಯಸ್ ಮೋಟಾರ್ಸ್ ಅನ್ನು ಶಾಸಕ ಎಲ್.ನಾಗೇಂದ್ರ ಗುರುವಾರ ಉದ್ಘಾಟಿಸಿ ಶುಭಹಾರೈಸಿದರು.

ಮೈಸೂರಿನ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಡಾ.ಧರಣೀದೇವಿ ಮಾಲಗತ್ತಿ ಜ್ಯೋತಿ ಬೆಳಗಿಸಿ ಶುಭಕೋರಿದರು.

ನೂತನ ಸಂಸ್ಥೆಯಲ್ಲಿ ಕಾರ್ ವಾಶಿಂಗ್, ಕಾರು ರಿಪೇರಿ, ಟಿಂಕರಿಂಗ್, ಪೇಂಟಿಂಗ್, ಪಾಲಿಶ್, ಇಂಟರ್ ಕ್ಲೀನಿಂಗ್, ಎಲೆಕ್ಟ್ರಿಕಲ್ ಕೆಲಸಗಳನ್ನು ನಿರ್ವಹಿಸಲಾಗುವುದು ಎಂದು ಮಾಲೀಕರಾದ ರವಿಕಿರಣ್ ರೈ ತಿಳಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: