ಮೈಸೂರು

ಗಾಯಗೊಂಡಿದ್ದ ನವಿಲಿಗೆ ಸಾರ್ವಜನಿಕರಿಂದ ಚಿಕಿತ್ಸೆ

ಹಾಸನ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ರಾಷ್ಟ್ರೀಯ ಪಕ್ಷಿ ನವಿಲಿಗೆ ಸಾರ್ವಜನಿಕರು ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆತ್ತೂರು ಬಳಿ ನವಿಲು ಆಹಾರಕ್ಕಾಗಿ ರಸ್ತೆಯ ಬಳಿ ಓಡಾಡುತಿತ್ತು. ಈ ಸಂದರ್ಭದಲ್ಲಿ ಅಪರಿಚಿತ ವಾಹನವೊಂದು ನವಿಲಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಪರಿಣಾಮ ಕಾಲು ಮುರಿತಕ್ಕೊಳಾಗಾದ ನವಿಲು ನಡೆಯಲು ಆಗದೇ ಪರಿತಪಿಸುತ್ತಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ನವಿಲನ್ನು ಹಿಡಿದು ತಕ್ಷಣ ಸ್ಥಳೀಯ ಪಶು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಬಳಿಕ ಸಕಲೇಶಪುರ ಅರಣ್ಯ ಇಲಾಖೆಗೆ ನವಿಲನ್ನು ಒಪ್ಪಿಸಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: