ಮೈಸೂರು

ಮತದಾನಕ್ಕೂ ಮುನ್ನ 48ಗಂಟೆಗಳ ಅವಧಿಯಲ್ಲಿ ಚುನಾವಣಾ ಸಂಬಂಧ ಕಾರ್ಯಕ್ರಮ ನಡೆಸುವಂತಿಲ್ಲ : ಡಿ.ರಂದೀಪ್ ಆದೇಶ

ಉಪ ಚುನಾವಣೆ ಮತದಾನಕ್ಕೂ ಹಿಂದಿನ 48 ಗಂಟೆಗಳ ಅವಧಿಯಲ್ಲಿ ಚುನಾವಣಾ ಸಂಬಂಧ ಯಾವುದೇ ಕಾರ್ಯಕ್ರಮ ನಡೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಡಿ.ರಂದೀಪ್ ಆದೇಶ ಹೊರಡಿಸಿದ್ದಾರೆ.
ಉಪ ಚುನಾವಣೆಗೆ ಸಂಬಂಧಿಸಿದಂತೆ ಮತದಾನವು ಏಪ್ರಿಲ್ 9 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಮತದಾನ ಮುಕ್ತಾಯದ ಅವಧಿಯ ಹಿಂದಿನ 48 ಗಂಟೆಗಳಲ್ಲಿ ಯಾವುದೇ ವ್ಯಕ್ತಿ, ರಾಜಕೀಯ ಪಕ್ಷ, ಉಮೇದುವಾರರು ಚುನಾವಣಾ ಸಂಬಂಧ ಯಾವುದೇ ಸಭೆ ಸಮಾರಂಭ ನಡೆಸುವಂತಿಲ್ಲ. ಮೆರವಣಿಗೆ ಮಾಡುವಂತಿಲ್ಲ. ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡುವಂತಿಲ್ಲ.
ಮತದಾರರಿಗೆ ಸುದ್ದಿ ಮಾಧ್ಯಮಗಳಾದ ಎಫ್.ಎಂ, ರೇಡಿಯೋ, ದೂರದರ್ಶನ, ಸಿನಿಮಾ, ಇತ್ಯಾದಿಗಳ ಮೂಲಕ ಪ್ರಚಾರ ಮಾಡುವಂತಿಲ್ಲ. ಅಲ್ಲದೆ ಮೊಬೈಲ್, ಫೇಸ್‍ಬುಕ್, ಟೆಲಿಗ್ರಾಂ, ವಾಟ್ಸಾಪ್, ವಾಯ್ಸ್ ಮೇಲ್, ಎಸ್.ಎಂ.ಎಸ್. ಮೂಲಕವೂ ಪ್ರಚಾರ ಸಂದೇಶ ಕಳುಹಿಸುವಂತಿಲ್ಲ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: