ಮೈಸೂರು

ಮೈಸೂರು ಜಿಲ್ಲಾ ಸಹಕಾರ ಯೂನಿಯನ್‍ಗೆ ಜಿಟಿಡಿ ಬಣದ ಹನುಮನಾಳು ಸಿದ್ದೇಗೌಡರಿಗೆ ಭರ್ಜರಿ ಗೆಲವು

ಮೈಸೂರು,ಅ.1:- ಜಿಲ್ಲಾ ಸಹಕಾರ ಯೂನಿಯನ್ ಆಡಳಿತ ಮಂಡಳಿಗೆ 2020-2025 ರವರೆಗಿನ ಮುಂದಿನ 5 ವರ್ಷಗಳ ಅವಧಿಗೆ ಇಂದು 15 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸೆ.25ರಂದು ಜಿ.ಟಿ.ದೇವೇಗೌಡ, ಹೆಚ್.ವಿ.ರಾಜೀವ್, ಸುನೀತಾ ವೀರಪ್ಪಗೌಡ ಸೇರಿದಂತೆ 14 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದರು.
ಉಳಿಕೆ ಒಂದು ನಿರ್ದೇಶಕರ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ವಿವಿದ್ದೊದೇಶ ಸಹಕಾರ ಸಂಘಗಳು ಮತ್ತು ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಹನುಮನಾಳು ಸಿದ್ದೇಗೌಡರು ಹಾಗೂ ಶಿವರಾಜ್ ರಾವ್ ಸ್ಪರ್ಧಿಸಿದ್ದರು, ಚುನಾವಣೆಯಲ್ಲಿ 22 ಸದಸ್ಯರ ಪೈಕಿ, ಜಿ.ಟಿ.ಡಿ.ಬಣದ ಹನುಮನಾಳು ಸಿದ್ದೇಗೌಡರಿಗೆ 20 ಮತಗಳು, ಶಿವರಾಜ್‍ರಾವ್‍ಗೆ 2 ಮತಗಳನ್ನು ಪಡೆದಿದ್ದಾರೆ. 20 ಮತಗಳನ್ನು ಪಡೆದ ಹನುಮನಾಳು ಸಿದ್ದೇಗೌಡರು ಭರ್ಜರಿ ಗೆಲವು ಸಾಧಿಸಿದ್ದಾರೆ.
ಜಿಲ್ಲಾ ಸಹಕಾರ ಯೂನಿಯನ್‍ಗೆ ನೂತನವಾಗಿ ಆಯ್ಕೆಯಾದ ನಿರ್ದೇಶಕರುಗಳ ವಿವರ ಇಂತಿದೆ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ ಹಾಗೂ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳ ಕ್ಷೇತ್ರದಿಂದ ಜಿ.ಟಿ.ದೇವೇಗೌಡ, ಬಿ.ಎನ್.ಸದಾನಂದ ಬಿ.ಮಹದೇವಸ್ವಾಮಿ, ಟಿ.ಪಿ.ಬೋರೇಗೌಡ ,ಕೆ.ಕೆ.ಹರೀಶ್ .ರಾಮೇಗೌಡ
ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಿಂದ ಕೆ.ಎಸ್.ಕುಮಾರ, ಕೆ.ಈರೇಗೌಡ
ಪಟ್ಟಣ ಸಹಕಾರ ಬ್ಯಾಂಕುಗಳ ಕ್ಷೇತ್ರ ಡಾ. ಎಂ.ಬಿ.ಮಂಜೇಗೌಡ
ಟಿ.ಎ.ಪಿ.ಎಂ.ಎಸ್.ಹಾಗೂ ಮಾರಾಟ ಸಹಕಾರ ಸಂಘಗಳ ಹಾಗೂ ಬಳಕೆದಾರರ ಸಹಕಾರ ಸಂಘಗಳ ಕ್ಷೇತ್ರ ಭೈರಪ್ಪ ವೈ. ಪತ್ತಿನ ಸಹಕಾರ ಸಂಘಗಳ ಕ್ಷೇತ್ರ ಹೆಚ್.ಎಸ್.ಪ್ರಶಾಂತ್ ತಾತಾಚಾರ್
ಗೃಹ ನಿರ್ಮಾಣ ಸಹಕಾರ ಸಂಘಗಳ ಕ್ಷೇತ್ರ,ಹೆಚ್.ವಿ.ರಾಜೀವ್,ಮಹಿಳಾ ಸಹಕಾರ ಸಂಘಗಳ ಕ್ಷೇತ್ರ
ಸುನೀತಾವೀರಪ್ಪಗೌಡ ಜೆ. ಎಸ್.ಸಿ.ಎಸ್.ಟಿ.ಸಹಕಾರ ಸಂಘಗಳ ಕ್ಷೇತ್ರ ಪಿ.ಸತೀಶ್
ವಿವಿದ್ದೊದೇಶ ಸಹಕಾರ ಸಂಘಗಳು ಮತ್ತು ಇತರೆ ಸಹಕಾರ ಸಂಘಗಳ ಕ್ಷೇತ್ರ
ಹನುಮನಾಳು ಸಿದ್ದೇಗೌಡ ಆಯ್ಕೆಯಾಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: