ಕ್ರೀಡೆಮೈಸೂರು

ಕ್ರೀಡೆ ಪ್ರತಿಷ್ಠೆಯಾಗಿರದೇ, ಹವ್ಯಾಸವಾಗಿರಲಿ : ಎಂ.ಮಲ್ಲಿಕಾರ್ಜುನ್

ಕ್ರೀಡೆಯನ್ನು ಪ್ರತಿಷ್ಠೆಗೋಸ್ಕರ ಆಡದೇ ಉತ್ತಮ ಹವ್ಯಾಸವನ್ನಾಗಿ ಮಾಡಿಕೊಳ್ಳಿ ಎಂದು ಮಾಜಿ ರಾಷ್ಟ್ರೀಯ ಫುಟ್ ಬಾಲ್ ಆಟಗಾರ ಎಂ.ಮಲ್ಲಿಕಾರ್ಜುನ್ ಕರೆ ನೀಡಿದರು.

ಮೈಸೂರು ವಿಶ್ವವಿದ್ಯಾಲಯದ ಫುಟ್ಬಾಲ್ ಮೈದಾನದಲ್ಲಿ ಅಥ್ಲೇಟ್ಸ್ ಫುಟ್ಬಾಲ್ ಕ್ಲಬ್ ವತಿಯಿಂದ ಏರ್ಪಡಿಸಲಾದ ಮೈಸೂರು ಅಂತರ್ ಕಾಲೇಜು ಎಎಫ್ ಸಿ ಕಪ್ ಫುಟ್ಬಾಲ್ ಪಂದ್ಯಾವಳಿಗೆ ಫುಟ್ಬಾಲ್ ಒದೆಯುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಜೀವನದಲ್ಲಿ ಕ್ರೀಡೆ ಅತ್ಯಮೂಲ್ಯ. ಸದಾ ಕ್ರೀಡೆಯಲ್ಲಿ ತೊಡಗಿಸಿಕೊಂಡವನು ಆರೋಗ್ಯಯುತವಾಗಿರುತ್ತಾನೆ. ಕೆಲವು ಪೋಷಕರು ತಮ್ಮ ಮಕ್ಕಳು ಓದೋದೆ ಇಲ್ಲ. ಯಾವತ್ತೂ ಆಡುತ್ತಿರುತ್ತಾರೆ ಎನ್ನುತ್ತಾರೆ. ಆದರೆ ಪೋಷಕರು ಅರ್ಥ ಮಾಡಿಕೊಳ್ಳಬೇಕು. ಕ್ರೀಡೆಯಲ್ಲಿ ತೊಡಗಿಸಿಕೊಂಡವರಿಗೂ ಒಳ್ಳೆಯ ಹುದ್ದೆಗಳು ಕ್ರೀಡಾ ಖೋಟಾದಡಿ ಲಭಿಸಲಿದೆ. ಕ್ರೀಡೆಗೆ ಕಳುಹಿಸಬೇಕಲ್ಲ ಎಂದು ಅರೆಮನಸ್ಸಿನಿಂದ ಕಳುಹಿಸದೇ ಸಂತೋಷವಾಗಿ ಕಳುಹಿಸಿ ಎಂದರು.

ಇತ್ತೀಚೆಗೆ ಕೆಲವರು ಶೋಕಿಗಾಗಿ ಪ್ರತಿಷ್ಠೆಗಾಗಿ ಕ್ರೀಡೆಗೆ ಬರುವಂತೆ ಕಾಣಿಸುತ್ತದೆ. ಆದರೆ ಅದು ತಪ್ಪು. ಪ್ರತಿಷ್ಠೆಗಾಗಿ ಕ್ರೀಡೆಗೆ ಬರಬೇಡಿ. ಕ್ರೀಡೆಯನ್ನು ಬೆಳೆಸಲು ಬನ್ನಿ ಎಂದರು. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಸೋತರೆ ಬೇಸರ ಪಡದೇ ಮುಂದಿನ ಗುಲುವಿನ ಮೆಟ್ಟಿಲು ಎಂದು ತಿಳಿದು ಆಟದಲ್ಲಿ ಮುಂದುವರಿಯಿರಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ  ಕ್ಲಬ್ ಅಧ್ಯಕ್ಷ ಡಾ.ಸಿ.ಕೃಷ್ಣ, ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕ ಪ್ರೊ.ಕೃಷ್ಣಪ್ಪ, ಕಾರ್ಯದರ್ಶಿ ಗುರುರಾಜ್ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಕಾಲೇಜುಗಳ 18 ತಂಡಗಳು ಪಾಲ್ಗೊಂಡಿವೆ.  (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: