ಸುದ್ದಿ ಸಂಕ್ಷಿಪ್ತ

ಅಕ್ಟೋಬರ್ 1ರಂದು ರಾಷ್ಟ್ರೀಯ ಕ್ರೀಡಾದಿನ : ಉಪನ್ಯಾಸ ಕಾರ್ಯಕ್ರಮ

ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಜನ್ಮದಿನದಂಗವಾಗಿ ಕರ್ನಾಟಕ ಕ್ರೀಡಾ ಪ್ರತಿಷ್ಠಾನದಿಂದ  ‘ರಾಷ್ಟ್ರೀಯ ಕ್ರೀಡಾದಿನ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಅಕ್ಟೋಬರ್ 1ರಂದು ಬೆಳಿಗ್ಗೆ 9:30ಕ್ಕೆ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ.

ನಗರದ ಪತ್ರಕರ್ತರ ಭವನದಲ್ಲಿ ಈ ಬಗ್ಗೆ ಸುದ್ಧಿಗೋಷ್ಠಿ ನಡೆಸಿ ಕ್ರೀಡಾ ದಿನವನ್ನು ಶ್ರೀಹೊಸ ಮಠದ ಅಧ್ಯಕ್ಷ ಚಿದಾನಂದ ಸ್ವಾಮಿ ಉದ್ಘಾಟಿಸುವರು. ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಬಿ.ಕೆ.ಬಸವರಾಜು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಕೆ.ಸುರೇಶ್ ಹಾಗೂ ಮೈಸೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಭಾಗವಹಿಸುವರು. ವಿಶೇಷ ಆಹ್ವಾನಿತರಾಗಿ ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಎಂ.ಎನ್.ನಟರಾಜು, ಬೆಂಗಳೂರು ಆಕಾಶವಾಣಿ (ಕ್ರೀಡಾವಿಭಾಗ) ಕಾರ್ಯನಿರ್ವಾಹಕ ಎಂ.ರೇಣುಕಾ ಪ್ರಸಾದ್, ಶಾರದಾ ವಿಲಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಾರ್ಥಸಾರಥಿ ಹಾಗೂ ಜಿ.ಎಂ.ಗಾಡ್ಕರ್ ಉಪಸ್ಥಿತರಿರುವರು.

ಅಂತಾರಾಷ್ಟ್ರೀಯ ಕ್ರೀಡಾಪಟು ಅರ್ಜುನ್ ದೇವಯ್ಯ ಉಪನ್ಯಾಸ ನೀಡುವರು. ನಾಗಭೂಷಣ ಆರಾಧ್ಯ ರಚಿಸಿದ ‘ಹಾಕಿ ದಂತ ಕಥೆ ಪದ್ಮ ಭೂಷಣ ಮೇಜರ್ ಧ್ಯಾನ್ ಚಂದ್’ ಪುಸ್ತಕ ಬಿಡುಗಡೆ ಸಮಾರಂಭ ಹಾಗೂ ಉದಯೋನ್ಮುಖ ಕ್ರೀಡಾಪಟುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.

 

Leave a Reply

comments

Related Articles

error: