ಕ್ರೀಡೆ

ಐಪಿಎಲ್ 2020: ಹೈದರಾಬಾದ್ ಆತಂಕ ಹೆಚ್ಚಿಸಿದ ಭುವನೇಶ್ವರ್ ಕುಮಾರ್ ಗಾಯ

ದೇಶ(ನವದೆಹಲಿ)ಅ.3:- ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 13 ರಲ್ಲಿ, ಸನ್ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್ ಅನ್ನು 7 ರನ್ ಗಳಿಂದ ಸೋಲಿಸುವ ಮೂಲಕ ಎರಡನೇ ಜಯ ದಾಖಲಿಸಿದೆ.
ಆದರೆ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಜಯಗಳಿಸಿದರೂ, ಸನ್ರೈಸರ್ಸ್ ಹೈದರಾಬಾದ್ ಸಮಸ್ಯೆ ಹೆಚ್ಚಾಗಿದೆ. ಸಿಎಸ್ಕೆ ಇನ್ನಿಂಗ್ಸ್ನ 19 ನೇ ಓವರ್ನಲ್ಲಿ ತಂಡದ ಅತ್ಯಂತ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಗಾಯಗೊಂಡರು. ಭುವನೇಶ್ವರ್ ಕುಮಾರ್ ಅವರ ಗಾಯದ ಬಗ್ಗೆ ಹೈದರಾಬಾದ್ ತಂಡ ಶೀಘ್ರದಲ್ಲೇ ಅಪ್ ಡೇಟ್ ಮಾಡಬಹುದು ಎನ್ನಲಾಗಿದೆ.

ಸಿಎಸ್ಕೆ ಇನ್ನಿಂಗ್ಸ್ ನಲ್ಲಿ ಭುವನೇಶ್ವರ್ ಕುಮಾರ್ ತಮ್ಮ ಕೊನೆಯ ಓವರ್ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. 19 ನೇ ಓವರ್ನ ಎರಡನೇ ಎಸೆತಕ್ಕೆ ಮುಂಚೆಯೇ ಅವರು ರನ್ ಅಪ್ಗೆ ಹೋಗಲು ತೊಂದರೆಯಾಯಿತಲ್ಲದೆ, ಮೈದಾನದಿಂದ ಹೊರಬಿದ್ದರು. ಇದರ ನಂತರ ಖಲೀಲ್ ಅಹ್ಮದ್ 19 ನೇ ಓವರ್ ಪೂರ್ಣಗೊಳಿಸಿದರೆ, ಅಬ್ದುಲ್ ಇನ್ನಿಂಗ್ಸ್ ನ ಕೊನೆಯ ಓವರ್ ಎಸೆದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: