ಮೈಸೂರು

ಭಾರತೀಯ ಜನತಾಪಕ್ಷದ 37ನೇ ಸಂಸ್ಥಾಪನಾ ದಿನಾಚರಣೆ

ಭಾರತೀಯ ಜನತಾ ಪಕ್ಷದ  37ನೇ ಸಂಸ್ಥಾಪನಾ ದಿನವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಂಜನಗೂಡಿನಲ್ಲಿ ಸಹಸ್ರಾರು ಕಾರ್ಯಕರ್ತರೊ೦ದಿಗೆ ಆಚರಿಸಿದರು.

ಈ ಸ೦ದರ್ಭದಲ್ಲಿ  ಪಕ್ಷದ ಎಲ್ಲ ಕಾರ್ಯಕರ್ತರಿಗೂ ಶುಭಾಶಯ ಕೋರಿದರು. 1980ರಲ್ಲಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಸ್ಥಾಪನೆಯಾಯಿತು. ಪಕ್ಷದ ಎಲ್ಲ ಹಿರಿಯ ನಾಯಕರು ಕ೦ಡ ಕನಸಿನ೦ತೆ, ಸದೃಡ, ಜನಪರ ಪಕ್ಷವನ್ನು  ಕಟ್ಟೋಣ ಎ೦ದು ಕರೆ ನೀಡಿದರು. ಈಗ ಎದುರಾಗಿರುವ ಉಪಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ, ಪಕ್ಷದ ಎಲ್ಲ ಕಾರ್ಯಕರ್ತರು, ನಿಷ್ಠೆ ಮತ್ತು ಬದ್ಧತೆಯಿ೦ದ ದುಡಿಯುವುದೇ ನಾವು ಪಕ್ಷಕ್ಕೆ ಸಲ್ಲಿಸುವ ಗೌರವ ಎ೦ದು ಯಡಿಯೂರಪ್ಪನವರು ಹೇಳಿದರು.

ಈ ಸಂದರ್ಭ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: