ಮೈಸೂರು

ಸಮುದಾಯದ ಒಗ್ಗಟ್ಟಿಗೆ ಯಜಮಾನರುಗಳು ಸಮನ್ವಯತೆಯಿಂದ ಶ್ರಮಿಸಿ : ಬೋಧಿರತ್ನ ಬಂತೇಜಿ

ಮೈಸೂರು,ಅ.3:- ತಿ.ನರಸೀಪುರ ಪಟ್ಟಣದಲ್ಲಿನ ದಲಿತ ಸಮುದಾಯದ ಒಗ್ಗಟ್ಟು ಹಾಗೂ
ಶ್ರೇಯೋಭಿವೃದ್ಧಿಗೆ ನೂತನವಾಗಿ ಆಯ್ಕೆಗೊಂಡಿರುವ ಯಜಮಾನರುಗಳು ಸಮನ್ವಯತೆಯಿಂದ ಶ್ರಮಿಸಬೇಕೆಂದು ನಳಂದ ಬುದ್ಧ ವಿಹಾರದ ಬೋಧಿರತ್ನ ಭಂತೇಜಿ ಹೇಳಿದರು.

ಪಟ್ಟಣದ ತ್ರಿವೇಣಿ ನಗರದಲ್ಲಿರುವ ನಳಂದ ಬುದ್ಧ ವಿಹಾರದಲ್ಲಿ ತ್ರಿವೇಣಿ ನಗರದಲ್ಲಿರುವ ದಲಿತ ಆದಿಕರ್ನಾಟಕ ಬಲಗೈ ಸಮುದಾಯದ ಕುಲಕೂಟಕ್ಕೆ ಆಯ್ಕೆಯಾದಂತಹ 9 ಮಂದಿ ಯಜಮಾನರುಗಳನ್ನ ಆಯ್ಕೆ ಮಾಡಿ, ಪ್ರಮಾಣ ಪತ್ರ ನೀಡಿ ಸನ್ಮಾನಿಸಿ ಮಾತನಾಡಿದ ಅವರು ಯಜಮಾನ’ ಹುದ್ದೆ ಸುಲಭವಾಗಿ ದೊರಕುವಂತಹದಲ್ಲ ಅದಕ್ಕೆ ಅದರದೇ ಆದಂತಹ ಘನತೆ, ಗಾಂಭೀರ್ಯವಿದ್ದು ಇಂತಹ ಹುದ್ದೆಯನ್ನು ಅಲಂಕರಿಸಿರುವ ನೀವೆಲ್ಲರೂ ಅತ್ಯಂತ ಶಿಸ್ತುಬದ್ಧ ಹಾಗೂ ಪ್ರಾಮಾಣಿಕತೆಯಿಂದ ನಡೆದು ಸಮುದಾಯದ ಏಳಿಗೆಗೆ ಕಟಿಬದ್ದರಾಗಿ ದುಡಿಯಬೇಕು ಎಂದರು.

ಹಾಗೆಯೇ ಗೌತಮ ಬುದ್ಧ ಹಾಗೂ ಅಂಬೇಡ್ಕರ್ ಅವರ ಆಶಯದಂತೆ ಕರ್ತವ್ಯ ನಿರ್ವಹಿಸಿ ಎಲ್ಲರ ಗೌರವ ತರುವ ಕೆಲಸವನ್ನು ಮಾಡಬೇಕು. ತ್ರಿವೇಣಿ ನಗರ ವ್ಯಾಪ್ತಿಯಲ್ಲಿರುವ ಸಮಸ್ತ ಸಮುದಾಯದ ಜನರನ್ನು ಒಗ್ಗಟ್ಟಿನಿಂದ ಸಂಘಟಿಸಿ, ಹಿತಾಸಕ್ತಿ ಕಾಪಾಡಲು ಬದ್ಧರಾಗಿರಬೇಕೆಂದು ನೂತನ ಯಜಮಾನರುಗಳಿಗೆ ಕರೆ ನೀಡಿದರು.

ಸಮುದಾಯದ ಯಜಮಾನರಾಗಿ ಶಿವಮಲ್ಲಯ್ಯ ಸೇರಿದಂತೆ ತುಂಬಲ ಸಿ. ಪ್ರಕಾಶ್, ನರೇಂದ್ರಬಾಬು, ಶಿವರುದ್ರ , ಶಿವಯ್ಯ, ಎಂ.ನಾಗೇಂದ್ರಕುಮಾರ್, ಹೇಮಂತ್ ಕುಮಾರ್, ರಂಗದಾಸಯ್ಯ ಹಾಗೂ ಜಗದೀಶ್ ಅವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: