ಕ್ರೀಡೆಪ್ರಮುಖ ಸುದ್ದಿ

ಮಾಜಿ ಕೇಂದ್ರ ಸಚಿವ ದಿಗ್ವಿಜಯ್ ಸಿಂಗ್ ಪುತ್ರಿ, ನ್ಯಾಷನಲ್ ಶೂಟರ್ ಶ್ರೇಯಸಿ ಸಿಂಗ್ ಬಿಜೆಪಿ ಸೇರ್ಪಡೆ

ದೇಶ(ನವದೆಹಲಿ)ಅ.5:- ಮಾಜಿ ಕೇಂದ್ರ ಸಚಿವ ಮತ್ತು ಬಿಹಾರದ ಬಾಂಕಾ ಸ್ಥಾನದ ಮಾಜಿ ಸಂಸದ ದಿವಂಗತ ದಿಗ್ವಿಜಯ್ ಸಿಂಗ್ ಅವರ ಪುತ್ರಿ ಶ್ರೇಯಸಿ ಸಿಂಗ್ ಬಿಜೆಪಿ ಸೇರ್ಪಡೆಗೊಂಡರು.
ಶ್ರೇಯಸಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಬಹುದು ಎಂದು ಹೇಳಲಾಗಿದೆ. ಶ್ರೇಯಸಿ ಸಿಂಗ್ ರಾಷ್ಟ್ರೀಯ ಶೂಟರ್. ಬಿಜೆಪಿ ಕೇಂದ್ರ ಕಚೇರಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಶ್ರೇಯಸಿ ಸಿಂಗ್ ಅವರಿಗೆ ಪಕ್ಷದ ಸದಸ್ಯತ್ವವನ್ನುನಿಡಿದರು. ಬಿಜೆಪಿಗೆ ಸೇರುವ ಸಮಯದಲ್ಲಿ ಅವರ ತಾಯಿ ಮತ್ತು ಬಾಂಕಾ ಮಾಜಿ ಸಂಸದೆ ಪುತುಲ್ ಸಿಂಗ್ ಕೂಡ ಹಾಜರಿದ್ದರು.
ಶೂಟರ್ ಶ್ರೇಯಸಿ ಸಿಂಗ್ ಅವರು 2018 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ದೇಶಕ್ಕಾಗಿ ಚಿನ್ನದ ಪದಕ ಗೆದ್ದಿದ್ದಾರೆ. ಗ್ಲ್ಯಾಸ್ಗೋದಲ್ಲಿ ನಡೆದ 2014 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಡೆದ ಶೂಟಿಂಗ್ ಡಬಲ್ ಟ್ರ್ಯಾಪ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಅವರು ದೇಶದ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಮಾತನಾಡಿ, ಅರ್ಜುನ ಪ್ರಶಸ್ತಿ ಪಡೆದ ಶ್ರೇಯಸಿ ಸಿಂಗ್ ಬಿಹಾರದ ಮೊದಲ ಪುತ್ರಿ. ಬಿಹಾರದ ಜನರ ಸೇವೆಗಾಗಿ ಬಿಜೆಪಿಗೆ ಸೇರಲು ಅವರು ನಿರ್ಧರಿಸಿದ್ದಾರೆ. ಅವರು ಪ್ರಧಾನಿ ನರೇಂದ್ರ ಮೋದಿಯವರ ಪ್ರಭಾವಕ್ಕೆ ಒಳಗಾಗಿದ್ದಾರೆ.
ಪುತುಲ್ ಸಿಂಗ್ ಬಾಂಕಾ ದಲ್ಲಿ 2010 ರಲ್ಲಿ ನಡೆದ ಉಪಚುನಾವಣೆಯಲ್ಲಿ ಲೋಕಸಭಾ ಸ್ಥಾನದಿಂದ ಜಯಗಳಿಸಿ ಸ್ಥಾನ ಸಂಸದರಾದರು. ಆದರೆ, 2014 ರ ಲೋಕಸಭಾ ಚುನಾವಣೆಯಲ್ಲಿ ಪುತುಲ್ ಸಿಂಗ್ ಸೋಲನುಭವಿಸಿದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: