ಮೈಸೂರು

ಅಗ್ರಿಗೋಲ್ಡ್ ಕಂಪನಿ ವಿರುದ್ಧ ಕ್ರಮಕೈಗೊಳ್ಳಲು ಒತ್ತಾಯಿಸಿ ಪ್ರತಿಭಟನೆ

ಅಗ್ರಿಗೋಲ್ಡ್ ಕಂಪನಿ ರಾಜ್ಯದ ಜನತೆಗೆ ವಂಚನೆ ಮಾಡಿದೆ ಎಂದು ಆರೋಪಿಸಿ, ಅದರ ವಿರುದ್ಧ ಕ್ರಮಕೈಗೊಳ್ಳಲು ಒತ್ತಾಯಿಸಿ  ಕರುನಾಡು ಜನಶಕ್ತಿ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸುರು ನ್ಯಾಯಾಲಯದ ಗಾಂಧಿ ಪ್ರತಿಮೆ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ  ರಾಜ್ಯದಲ್ಲಿ ಅಗ್ರಿಗೋಲ್ಡ್ ಕಂಪನಿಯು 8,41,161ಗ್ರಾಹಕರಿಗೆ 1639ಕೋಟಿ ರೂ.ಗಳನ್ನು ವಂಚಿಸಿದೆ. ಈ ಕಂಪನಿಯು ಆಂಧ್ರದ್ದಾಗಿದ್ದು  ನಮ್ಮ ರಾಜ್ಯದ ಜನರ ಹಣವನ್ನು ಲೂಟಿ ಮಾಡಿದೆ. ಈ ಕಂಪನಿಯನ್ನು ನಮ್ಮ ರಾಜ್ಯದಲ್ಲಿ ಸ್ಥಾಪಿಸಲು ಹೇಗೆ ಅನುಮತಿ ನೀಡಿದರೋ ತಿಳಿಯದಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಕಾರಣರಾಗಿದ್ದು, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅಧ್ಯಕ್ಷ ಯತೀರಾಜ್, ಪ್ರಧಾನಕಾರ್ಯದರ್ಶಿ ಚಂದ್ರು.ಕೆ, ಮಹೇಶ್, ಗಿರೀಶ್, ನಂದೀಶ್, ಆರ್.ಮಹದೇವು, ರಾಜೇಂದ್ರ, ರಾಮು, ಉಮೇಶ್, ನಾಗರಾಜ್, ವಸಮತ್ ಕುಮಾರ್, ರಾಚಪ್ಪ, ಮಹದೇವು, ಪರಮೇಶ್, ಮಹಿಳಾ ಘಟಕದ ಲಕ್ಷ್ಮಿ, ಜ್ಯೋತಿ, ಶಾಮತಿ, ಪದ್ಮ, ಪಲ್ಲವಿ, ಪುಟ್ಟಿ ಪಾಲ್ಗೊಂಡಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: