ಮೈಸೂರು

ಮಾಧ್ಯಮ ನಿಯಂತ್ರಣ ವಿರೋಧಿಸಿ ಪ್ರತಿಭಟನೆ

ಮಾಧ್ಯಮ ನಿಯಂತ್ರಣಕ್ಕೆ ಮುಂದಾಗಿರುವ ಸ್ಪೀಕರ್, ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಕ್ರಮವನ್ನು ಖಂಡಿಸಿ ರಾಜ್ಯ ದ್ರಾವಿಡ ಮಹಾಸಭಾ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಮಾಧ್ಯಮಗಳು ನಮ್ಮ ನಿಯಂತ್ರಣಕ್ಕೆ ಒಳಗಾಗಿ ಕೆಲಸಮಾಡಬೇಕು ಎಂಬುದನ್ನು ನಿರೀಕ್ಷಿಸಬಾರದು. ಈ ರೀತಿ ಅಪೇಕ್ಷಿಸುವುದು ಪ್ರಜಾತಂತ್ರ ವ್ಯವಸ್ಥೆಗೆ ಅಪಾಯಕಾರಿ. ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಮಾಧ್ಯಮ ನಿಯಂತ್ರಣಕ್ಕೆ ಮುಂದಾದರೆ ಯಾವುದೇ ಹೋರಾಟಕ್ಕೂ ಸಿದ್ಧ ಎಂದರು.

ಪ್ರತಿಭಟನೆಯಲ್ಲಿ  ರಾಜ್ಯಾಧ್ಯಕ್ಷ ಅಶೋಕಪುರಂ ಶ್ರೀನಿವಾಸ್, ಕಾರ್ಯದರ್ಶಿ ಗಾಂಧಿನಗರ ಶಾಂತಮ್ಮ, ಶ್ರೀನಿವಾಸ್, ಸೈಯದ್ ಸಲೀಂ, ಸರ್ದಾರ್ ಅಹ್ಮದ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: