ಮೈಸೂರು

ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಚಾಲನೆ

ಮೈಸೂರು,ಅ.5:- ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯ ಅನುದಾನದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗೆ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಉಪಸ್ಥಿತಿಯಲ್ಲಿ ಹಾಗೂ ಮೈಸೂರು ಮಹಾನಗರ ಪಾಲಿಕೆ ವಾರ್ಡ ಸಂ-18 ರ ಸದಸ್ಯರಾದ ಬಿ.ವಿ.ರವೀಂದ್ರ, ಉಪಸ್ಥಿತಿಯಲ್ಲಿ ಮೇದರ್ ಬ್ಲಾಕ್ ಕೊಳಚೆ ಪ್ರದೇಶದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯ ಅನುದಾನದಲ್ಲಿ ಅಗತ್ಯವಾದ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಕಾಮಗಾರಿಯ ವೆಚ್ಚ 30.00 ಲಕ್ಷ ರೂ. ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.
ಮೈಸೂರು ಮಹಾನಗರ ಪಾಲಿಕೆವತಿಯಿಂದ 22 ಪರಿಶಿಷ್ಠ ಜಾತಿ / ಪಂಗಡದ ಕುಟುಂಬದ ಫಲಾನುಭವಿಗಳಿಗೆ ಸೋಲಾರ್ ಲೈಟ್ ವಿತರಣೆ, ಇಂಡಿಯನ್ ಆಯಿಲ್ ಕಾರ್ಫೋರೇಷನ್ ವತಿಯಿಂದ ಕಸ ಸಂಗ್ರಹಣಾ ತೊಟ್ಟಿಗಳ ಹಸ್ತಾಂತರ & ಮಹಾನಗರ ಪಾಲಿಕೆ ಸದಸ್ಯರ ಅನುದಾನದಲ್ಲಿ ಆಕಾಶವಾಣಿ ವೃತ್ತದಿಂದ ವಿಕ್ರಮ್ ಆಸ್ಪತ್ರೆಯ ವರೆಗೆ ಫುಟ್ ಪಾತ್ ನಿರ್ಮಾಣ ಕಾಮಗಾರಿ 10.00 ಲಕ್ಷ ರೂ. ಕಾಮಗಾರಿಗೆ ಗುದ್ದಲಿಪೂಜೆ ಕಾರ್ಯಕ್ರಮವನ್ನು ನೆರವೇರಿಸಿದರು.
ಈ ವೇಳೆ ಮೈಸೂರು ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ-18 ರ ಮಾನ್ಯ ಸದಸ್ಯರಾದ ಬಿ.ವಿ.ರವೀಂದ್ರ , ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯ ಕಾರ್ಯಪಾಲಕ ಇಂಜಿನಿಯರ್, ,ಹರೀಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ರಾಮಚಂದ್ರ, ಚಾಮರಾಜ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ಸೋಮಶೇಖರರಾಜು, ಪ್ರಧಾನ ಕಾರ್ಯದರ್ಶಿ ಪುನೀತ್, ರಮೇಶ್, ಷಣ್ಮುಗಂ, ದಿನೇಶ್ ಗೌಡ, ಎಸ್.ಟಿ.ಮೋರ್ಚಾ ಮಹೇಶ್, ರಾಮಣ್ಣ, ರೂಪ, ಕವಿತ, ಈರಣ್ಣ, ಮುರುಗೇಶ್, ಹಾಗೂ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-4 ರ ಸಹಾಯಕ ಕಮೀಷನರ್ ಪ್ರಿಯದರ್ಶಿನಿ, ಅಭಿವೃದ್ದಿ ಅಧಿಕಾರಿ ಹೇಗಾನಂದ, ಅಭಿಯಂತರರಾದ ರಾಮಣ್ಣ, ಮುಂತಾದವರುಗಳು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: