ಪ್ರಮುಖ ಸುದ್ದಿ

ಬದ್ರಿನಾಥ್, ಕೇದಾರನಾಥ ಯಾತ್ರೆಗೆ ತೆರಳಲು ಭಕ್ತರ ಗರಿಷ್ಠ ಮಿತಿ 3ಸಾವಿರಕ್ಕೆ ಹೆಚ್ಚಳ

ದೇಶ(ಉತ್ತರಾಖಂಡ)ಅ.6:- ಉತ್ತರಾಖಂಡದ ಎತ್ತರದ ಹಿಮಾಲಯ ಪ್ರದೇಶದಲ್ಲಿ ನೆಲೆಗೊಂಡಿರುವ ಪ್ರಸಿದ್ಧ ಯಾತ್ರಾ ಸ್ಥಳ ಬದ್ರಿನಾಥ್ ಮತ್ತು ಕೇದಾರನಾಥಕ್ಕೆ ಭೇಟಿ ನೀಡುವ ಭಕ್ತರ ಗರಿಷ್ಠ ಮಿತಿಯನ್ನು ಈಗ ದಿನಕ್ಕೆ ಮೂರು ಸಾವಿರಕ್ಕೆ ಹೆಚ್ಚಿಸಲಾಗಿದೆ.
ಉತ್ತರಾಖಂಡ ನಾಲ್ಕು ಯಾತ್ರಾಸ್ಥಳಗಳ ದೇವಸ್ತಾನಂ ಮಂಡಳಿಯು ನೀಡಿರುವ ಇತ್ತೀಚಿನ ಆದೇಶದ ಪ್ರಕಾರ, ಗರಿಷ್ಠ ಸಂಖ್ಯೆಯ ಭಕ್ತರನ್ನು ಗಂಗೋತ್ರಿ ಧಾಮ್ಗೆ 900 ಮತ್ತು ಯಮುನೋತ್ರಿ ಧಾಮ್ಗೆ 700 ಕ್ಕೆ ಹೆಚ್ಚಿಸಲಾಗಿದೆ. ಆದರೆ, ಹೆಲಿಕಾಪ್ಟರ್ ಸೇವೆಯನ್ನು ಬಳಸಿಕೊಂಡು ಧಾಮ್ಗೆ ಭೇಟಿ ನೀಡಲು ಬರುವ ಯಾತ್ರಾರ್ಥಿಗಳ ಸಂಖ್ಯೆಯನ್ನು ಇದರಲ್ಲಿ ಸೇರಿಸಲಾಗಿಲ್ಲ. ಮೊದಲು ಅನೇಕ ಯಾತ್ರಾರ್ಥಿಗಳು ಹೋಗಬಹುದಿತ್ತು.
ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿನಾಥ್ ರಾಮನ್ ಮಾತನಾಡಿ, ಬದ್ರಿನಾಥ್ ಯಾತ್ರೆಗೆ 3000, ಕೇದಾರನಾಥದಲ್ಲಿ 3000, ಗಂಗೋತ್ರಿಯಲ್ಲಿ 900 ಮತ್ತು ಯಮುನೋತ್ರಿಯಲ್ಲಿ 700 ಜನರಿಗೆ ದರ್ಶನಕ್ಕೆ ಸಾಧ್ಯವಿದೆ. ಈ ಹಿಂದೆ ಕೇವಲ 1,200 ಯಾತ್ರಾರ್ಥಿಗಳಿಗೆ ಮಾತ್ರ ಬದ್ರಿನಾಥ್, 800 ಕೇದಾರನಾಥ, 600 ಗಂಗೋತ್ರಿ ಮತ್ತು 400 ಯಮುನೋತ್ರಿ ಹೋಗಲು ಅವಕಾಶವಿತ್ತು ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: