Uncategorizedಮೈಸೂರು

ಸಿದ್ಧಾರ್ಥ ನಗರದ ಸರ್ವೆ ನಂ.4ರ ಗೊಂದಲ ಶೀಘ್ರವೇ ಪರಿಹರಿಸಲು ಒತ್ತಾಯ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಸಿದ್ಧಾರ್ಥ ಬಡಾವಣೆ ಮತ್ತು ಕೆ.ಸಿ.ಬಡಾವಣೆ ಖಾತೆ ಸರ್ವೆ ನಂ.4ರಲ್ಲಿ ವರ್ಗಾವಣೆ ಪರವಾನಿಗೆ ನೀಡುತ್ತಿಲ್ಲ. ಈ ಹಿನ್ನಲೆಯಲ್ಲಿ ಗೊಂದಲ ಉಂಟಾಗಿದೆ ಎಂದು ಕಾರಂಜಿ ಮತ್ತು ಸಿದ್ಧಾರ್ಥನಗರ ತೆರಿಗೆದಾರರ ಸಂಘ ಆರೋಪಿಸಿದೆ.

ಅವರು ನಗರದ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಖಾತೆ ಬದಲಾವಣೆ ಇಲ್ಲದೆ ಮನೆ ನಿರ್ಮಿಸಲು ಅಥವಾ ಕಟ್ಟಡ ಪರವಾನಿಗೆ ನೀಡುತ್ತಿಲ್ಲ. ಮನೆ ಮಾಲೀಕರು ನಿಧನ ಹೊಂದಿದ್ದು ಅವರ ಕುಟುಂಬದವರಿಗೆ ಖಾತೆ ವರ್ಗಾವಣೆ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಬಡಾವಣೆ ನಿರ್ಮಾಣವಾಗಿ ಮೂವತ್ತು ವರ್ಷ ಸಂದಿದ್ದು ಪಾಲಿಕೆಯ ವಶದಲ್ಲಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ ಹೋದರೆ ಸಿದ್ಧಾರ್ಥ ನಗರದ ಸೇವಾ ತೆರಿಗೆ ದಾರರ ಸಂಘ ಹಾಗೂ ಸರ್ವೆ ನಂ4ರ ಎಲ್ಲಾ ಪ್ರಗತಿಪರ ಸಂಘಗಳು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಅಮರಣಾಂತರ ಉಪವಾಸ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

 

Leave a Reply

comments

Tags

Related Articles

error: