ಮೈಸೂರು

ಪಾಲಿಕೆ ಸಭೆಗೆ ಹಾಜರಾಗುವವರಿಗೆ ಕೋವಿಡ್ ತಪಾಸಣೆ : ಓರ್ವ ಸದಸ್ಯ, ಮೂವರು ಸಿಬ್ಬಂದಿಗೆ ಸೋಂಕು

ಮೈಸೂರು,ಅ.6:- ಇಂದು ಮೈಸೂರು ಮಹಾನಗರಪಾಲಿಕೆಯಲ್ಲಿ ಸಾಮಾನ್ಯ ಸಭೆ ನಡೆಯಲಿದ್ದು, ಸಾಮಾನ್ಯ ಸಭೆಗೆ ಹಾಜರಾಗುವವರಿಗೆ ಕಡ್ಡಾಯವಾಗಿ ನಿನ್ನೆ ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು. ಕೊರೋನಾ ಪರೀಕ್ಷೆಯಲ್ಲಿ ಓರ್ವ ನಗರಪಾಲಿಕೆ ಸದಸ್ಯ ಮೂವರು ಸಿಬ್ಬಂದಿಯಲ್ಲಿ ಕೊರೋನಾ ವೈರಸ್ ಸೋಂಕಿರುವುದು ದೃಢಪಟ್ಟಿದೆ.
ನಗರಪಾಲಿಕೆ ಸಾಮಾನ್ಯ ಸಭೆಗೆ ಹಾಜರಾಗುವವರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು ಎಂದು ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಆದೇಶ ಹೊರಡಿಸಿದ್ದರು. ಹೀಗಾಗಿ ನಗರಪಾಲಿಕೆ ಸದಸ್ಯರುಗಳು, ಅಧಿಕಾರಿಗಳು, ಸಿಬ್ಬಂದಿ ಸೇರಿ 142ಮಂದಿಯನ್ನು ನಗರ ಪಾಲಿಕೆ ಆವರಣದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಸಮಯದಲ್ಲಿ ನಗರಪಾಲಿಕೆ ಸದಸ್ಯರಿಗೆ ಕೊರೋನಾ ವೈರಸ್ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಅವರ ಕುಟುಂಬದವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕುಟುಂಬದ ಮೂವರಲ್ಲಿ ಕೊರೋನಾ ವೈರಸ್ ಸೋಂಕು ಕಂಡು ಬಂದಿದೆ. ವೈರಸ್ ಕಂಡು ಬಂದವರನ್ನು ಹೊರತುಪಡಿಸಿ ಉಳಿದವರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲಿದ್ದಾರೆಂದು ಪಾಲಿಕೆಯ ಆಯುಕ್ತ ಗುರುದತ್ ಹೆಗಡೆ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: