ಮೈಸೂರು

ಬಾಕಿ ಉಳಿದಿರುವ 130ಕೋಟಿ ರೂ.ಕಾಮಗಾರಿ ಬಿಲ್ ಪಾವತಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಅ.6:- 2017ರಿಂದ ಬಾಕಿ ಉಳಿದಿರುವ 130ಕೋಟಿ ರೂ.ಕಾಮಗಾರಿ ಬಿಲ್ ಪಾವತಿಸುವಂತೆ ಒತ್ತಾಯಿಸಿ ಮೈಸೂರು ಮಹಾನಗರ ಪಾಲಿಕೆ ಸಿವಿಲ್ ಗುತ್ತಿಗೆದಾರರ ಸಂಘ ಪ್ರತಿಭಟನೆ ನಡೆಸಿತು.
ಮೈಸೂರು ಮಹಾನಗರ ಪಾಲಿಕೆ ಕಛೇರಿ ಎದುರು ಇಂದು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮಾತನಾಡಿ ಮೈಸೂರು ನಗರ ಪಾಲಿಕೆಯಲ್ಲಿ 2017ರಿಂದ ನಿರ್ವಹಿಸಿರುವ ಸುಮಾರು 130ಕೋಟಿ ರೂ.ಗಳ ನಗರ ಪಾಲಿಕೆ ಅನುದಾನದ ಕಾಮಗಾರಿ ಬಿಲ್ ಗಳು ಪಾವತಿ ಆಗದೆ ಉಳಿದಿವೆ. ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಲು ಬ್ಯಾಂಕ್, ಖಾಸಗಿ ಹಣಕಾಸು ಸಂಸ್ಥೆಗಳು ಸಾಮಗ್ರಿ ಸರಬರಾಜುದಾರರಿಂದ ಸಾಲ ಮಾಡಿ ಕಾಮಗಾರಿ ನಿರ್ವಹಿಸುತ್ತಿರುತ್ತಾರೆ. ಸಾಲ ನೀಡಿರುವವರು ಸಾಲ ಮರುಪಾವತಿ ಮಾಡುವಂತೆ ಒತ್ತಾಯ ಮಾಡುತ್ತಿರುತ್ತಾರೆ. ಗುತ್ತಿಗೆದಾರರಿಗೆ ಜೀವನ ನಡೆಸಲು ತುಂಬಾ ಕಷ್ಟವಾಗಿದೆ ಎಂದರು.
ನಗರಪಾಲಿಕೆ ಬಿಲ್ ವಿಳಂಬವಾದ ಕಾರಣ ನಾವು 3/10/2020ರಿಂದ ಕಾಮಗಾರಿ ಸ್ಥಗಿತಗೊಳಿಸಿದ್ದೇವೆ. ಅನೇಕ ಬಾರಿ ಪಾಲಿಕೆಯ ಆಯುಕ್ತರ ಬಳಿ ಬಿಲ್ ಪಾವತಿಸುವಂತೆ ಒತ್ತಾಯ ಮಾಡಿರುತ್ತೇವೆ. ಆಯುಕ್ತರು ಕೇಬಲ್ ಹಣ ಬಂದ ತಕ್ಷಣ ಬಿಲ್ ಪಾವತಿಸುತ್ತೇವೆ ಎಂದಿದ್ದು, ಬಿಲ್ ಪಾವತಿಸಿಲ್ಲ. ಗುತ್ತಿಗೆದಾರರ ಆರ್ಥಿಕ ಸಂಕಷ್ಟಕ್ಕೆ ಮತ್ತು ಗುತ್ತಿಗೆದಾರರ ಮನವಿಗೆ ಸ್ಪಂದಿಸಿ ಗುತ್ತಿಗೆದಾರರ ನಗರಪಾಲಿಕೆ ಅನುದಾನದ ಕಾಮಗಾರಿ ಬಿಲ್ ಕೊಡಿಸಬೇಕೆಂದು ಮನವಿ ಮಾಡಿದರು.
ಅಧ್ಯಕ್ಷ ಚಂದ್ರಶೇಖರಯ್ಯ, ಗೌರವ ಅಧ್ಯಕ್ಷ ಸಿ.ವೆಂಕಟಪ್ಪ, ಎಂ.ಭೈರಪ್ಪ, ಆರ್.ಮಾಲಕೊಂಡಯ್ಯ, ಕೆ.ದಶರಥ, ಎಂ.ಎನ್.ಹರ್ಷವರ್ಧನ್, ಎಸ್.ಯೋಗೇಶ್, ಎಸ್.ಎಲ್.ನಾರಾಯಣ್, ಕೆ.ಎನ್.ರಾಮೇಗೌಡ, ಹೆಚ್.ಟಿ.ರಾಜಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: