ಮೈಸೂರು

ವಿದ್ಯುತ್ ತಗುಲಿ ದಂಪತಿ ಸಾವು

 ವಿದ್ಯುತ್ ತಂತಿ ತಗುಲಿ ದಂಪತಿ ಸಾವನ್ನಪ್ಪಿದ ಘಟನೆ ಮಂಡ್ಯದಲ್ಲಿ ನಡೆದಿದೆ.

ಮೃತರನ್ನು ನಾಗಮಂಗಲ ತಾಲೂಕಿನ ಆರಣೆ ಗ್ರಾಮದ ನಿವಾಸಿಗಳಾದ  ಜಯಮ್ಮ(56), ವೆಂಕಟಯ್ಯ(63) ಎಂದು ಗುರುತಿಸಲಾಗಿದೆ.  ಬಟ್ಟೆಯನ್ನು ಒಗೆದು  ಬಿಸಿಲಿಲ್ಲಿ ಒಣಗಿಸಲು ಹಾಕಿದ್ದರು.ಅದನ್ನು ತರಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.

ಮೊದಲು ವೆಂಕಟಯ್ಯ ಅವರಿಗೆ ವಿದ್ಯುತ್ ತಂತಿ ತಗುಲಿತ್ತು. ಬಳಿಕ ಪತಿಯನ್ನು ಬಿಡಿಸಲು ತೆರಳಿದ ಪತ್ನಿಗೂ ವಿದ್ಯುತ್ ಶಾಕ್ ತಗುಲಿದೆ. ಇದರಿಂದ  ಇಬ್ಬರೂ ಮೃತಪಟ್ಟಿದ್ದಾರೆ.

ಬೆಳ್ಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: