ಮೈಸೂರು

ಪಾಲಿಕೆ ಆಯುಕ್ತರ ವಿರುದ್ಧ ಕೌನ್ಸಿಲ್ ಸಭೆಯಲ್ಲಿ ಅಸಮಾಧಾನ ಹೊರಹಾಕಿದ ಮೇಯರ್ ತಸ್ನೀಂ

ಮೈಸೂರು,ಅ.6:- ಮೈಸೂರು ನಗರಪಾಲಿಕೆ ಕೌನ್ಸಿಲ್ ಸಭೆಯು ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಆರಂಭವಾಗಿದೆ.

ಆರಂಭಕ್ಕೂ ಮುನ ಜನಪ್ರತಿನಿಧಿಗಳಾದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಸಚಿವ ಸುರೇಶ ಅಂಗಡಿ, ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಕೊರೋನಾ, ಅನಾರೋಗ್ಯದಿಂದ ಅಗಲಿದ ಗಣ್ಯರಿಗೆ ಶ್ರದಾಂಜಲಿ ಸಲ್ಲಿಸಲಾಯಿತು.
ಸಭೆಯಲ್ಲಿ ಮೇಯರ್ ತಸ್ನೀಂ,ಪಾಲಿಕೆ ಅಧ್ಯಕ್ಷ ಗುರುದತ್ ಹೆಗಡೆ ಭಾಗಿಯಾಗಿದ್ದಾರೆ.
ಸಭೆ ಆರಂಭವಾಗುತ್ತಿದಂತೆಯೇ ಸಭೆಯಲ್ಲಿ ಮಾತಿನ ಚಕಮಕಿ ನಡೆದಿದೆ. ಪ್ರತಾಪ್ ಸಿಂಹ ಅವರ ಹೆಸರಿನ ಬೋರ್ಡ್ ಬದಿಯಲ್ಲಿ ಇಟ್ಟಿದೀರಿ, ಅವರು ನಮ್ಮ ಸಂಸದರು,ಅವರಿಗೆ ಅಗೌರವ ಮಾಡುತ್ತಿದ್ದೀರಿ, ಅವರು ಬಂದಿಲ್ಲ ಅಂದ್ರೆ ಬೋರ್ಡ್ ನ ಒಳಗೆ ಎತ್ತಿಡಬೇಕಿತ್ತು, ಆದರೆ ಮೂಲೆಯಲ್ಲಿ ಇಟ್ಟು ಅವಮಾನ ಮಾಡುತ್ತಿದ್ದೀರಿ, ನೀವು ಬೇಕು ಅಂತನೇ ಹೀಗೆ ಮಾಡುತ್ತಿದ್ದೀರಿ ಎಂದು ಬಿಜೆಪಿ ಸದಸ್ಯರು ಆರೋಪಿಸಿದರು. ಆರೋಪ ಮಾಡುತ್ತಿದಂತೆಯೇ ವಿರೋಧ ವ್ಯಕ್ತಪಡಿಸಿದ ಕೆಲ ಪಾಲಿಕೆ ಸದಸ್ಯರು ಇದು ಬೇಡದ ವಿಷಯ,ಹತ್ರಾಸ್ ನಲ್ಲಿ ಯುವತಿ ಮೇಲೆ ಅತ್ಯಾಚಾರ ಆಗಿದೆ ಅದನ್ನು ಚರ್ಚೆ ಮಾಡ್ಬೇಕು. ಬೇರೆ ಕೆಲಸಗಳ ಬಗ್ಗೆ ಚರ್ಚೆ ಮಾಡಬೇಕೆಂದು ಹೇಳಿದ್ದರಿಂದ ವಾದವಿವಾದ ನಡೆಯಿತು.
ಅನುದಾನದ ವಿಚಾರದಲ್ಲಿ ಮಾತಿನ ಜಟಾಪಟಿ ನಡೆದಿದ್ದು, ಆಯುಕ್ತರು ಹಾಗೂ ಪಾಲಿಕೆ ಸದಸ್ಯರ ನಡುವೆ ಜಗ್ಗಾಟ ನಡೆಯಿತು. ಆಯುಕ್ತರ ವಿರುದ್ಧ ಮೇಯರ್ ತಸ್ನೀಂ ನೇರ ಅಸಮಾಧಾನ ಹೊರ ಹಾಕಿದರು. ಮೇಯರ್ ಸ್ಥಾನಕ್ಕೆ ತನ್ನದೇ ಆದ ಸ್ಥಾನ ಮಾನ ಇದೆ. ಆದರೆ ಮೇಯರ್ ರೂಲಿಂಗ್ ಆದೇಶ ಇಲ್ಲದಾಗಿದೆ. ನಾನು ಪ್ರತಿ ವಾರ್ಡ್ 50ಲಕ್ಷ ಅನುದಾನ ವನ್ನು ಆದೇಶ ಮಾಡಿದ್ದೇನೆ. ಆದರೆ ಇನ್ನೂ ಹಣ ನೀಡಿಲ್ಲ. ಇದು ಮೇಯರ್ ಸ್ಥಾನಕ್ಕೆ ಆಗಿರುವ ಅವಮಾನ. ನನ್ನ ಮಾತಿಗೆ ನಗರ ಪಾಲಿಕೆ ಸದಸ್ಯರಿಗೆ ಬೆಲೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೌನ್ಸಿಲ್ ಸಭೆಯಲ್ಲೂ ಉತ್ತರ ಪ್ರದೇಶದ ಅತ್ಯಾಚಾರ ಕಿಚ್ಚು
ಕೌನ್ಸಿಲ್ ಸಭೆಯಲ್ಲೂ ಉತ್ತರ ಪ್ರದೇಶದ ಯುವತಿ ಮೇಲಿನ ಅತ್ಯಾಚಾರ ಪ್ರಕರಣದ ಕಿಚ್ವು ಪ್ರತಿಧ್ವನಿಸಿತು. ಸಭೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಜೆ ಡಿ ಎಸ್ ಸದಸ್ಯರು ನೇರ ಆರೋಪ ಮಾಡಿದರು. ಸಭೆಯಲ್ಲಿ ಪಾಲಿಕೆ ಸದಸ್ಯೆ ಆರೀಫ್ ಹುಸೇನ್ ಚರ್ಚೆಗೆ ಅವಕಾಶ ಕೇಳಿದರು. ನಂತರ ಸಭೆಯಲ್ಲಿ ಹತ್ರಾಸ್ ಅತ್ಯಾಚಾರ ಪ್ರಕರಣ ಚರ್ಚೆಗೆ ಬಂದಿತು.
ಈ ವೇಳೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾಂಗ್ರೆಸ್ ಸದಸ್ಯರ ನಡುವೆ ನೇರ ವಾಗ್ವಾದ ನಡೆದಿದ್ದು ಇದು ಬೇಡದ ವಿಚಾರ. ಇದು ಕೌನ್ಸಿಲ್ ಸಭೆ,ಆಗಬೇಕಾದ ಕೆಲಸ ಚರ್ಚೆ ಮಾಡೋಣ ಎಂದು ಹೇಳಿ ವಿಪಕ್ಷಗಳ ಅರೋಪಕ್ಕೆ ಬಿಜೆಪಿ ಸದಸ್ಯರು ಅಕ್ರೋಶ ಹೊರಹಾಕಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: