ಮೈಸೂರು

ಸರಳ ದಸರೆಯೋ, ಸಂಭ್ರಮದ ದಸರೆಯೋ?

ಮೈಸೂರು, ಅ.7: – ಇತ್ತೀಚೆಗೆ ಪ್ರಸ್ತುತ ವರ್ಷ ರಾಜ್ಯ ಸರ್ಕಾರ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸರಳವಾಗಿ ದಸರಾ ಆಚರಿಸಬೇಕೆಂದು ಘೋಷಣೆ ಮಾಡಿರುವುದು ಸರಿಯಷ್ಟೆ. ಕೇವಲ ಎರಡು ಸಾವಿರ ಮಂದಿಗೆ ಮಾತ್ರ ಪ್ರವೇಶ ಎಂದು ತಿಳಿಸಿದೆ. ಆದರೆ ದಸರಾ ಆಚರಣೆಗಾಗಿ 10 ಕೋಟಿ ಬಿಡುಗಡೆ ಮಾಡಿರುವುದು ಎಷ್ಟು ಸರಿ ಎಂದು ಸಮಾಜ ಸೇವಕ ಜಿ.ಪಿ.ಹರೀಶ್ ಪ್ರಶ್ನಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಆ ಹಣ ಜನಸಾಮಾನ್ಯರಿಗೆ ಭಾರೀ ಹೊರೆಯಾಗಲಿದೆ ಆ ಎರಡು ಸಾವಿರ ಜನರ ಹೆಸರನ್ನು ಪಟ್ಟಿ ಮಾಡಿ ಅವರ ಹತ್ತಿರ ಈ ಹಣ ವಸೂಲಿ ಮಾಡಿ, ಅದೇ 10 ಕೋಟಿ ರೂ. ಹಣವನ್ನು ಕೊರೋನಾದಿಂದ ನರಳುತ್ತಿರುವವರಿಗೆ ವಿನಿಯೋಗಿಸಿದ್ದರೆ, ಸಂಕಷ್ಟದಲ್ಲಿರುವವರಿಗೆ ತುಂಬಾ ಸಹಾಯವಾದರೂ ಆಗುತ್ತಿತ್ತು. ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಈಗಾಗಲೇ ದೀಪಾಲಂಕಾರದ ಕಾರ್ಯಾಚರಣೆ ಭರದಿಂದ ಸಾಗುತಿದ್ದು, ನಗರದೆಲ್ಲೆಡೆ ರಾರಾಜಿಸುತ್ತಿವೆ. ದಸರಾ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ದೀಪಾಲಂಕಾರ. ಹೀಗೆ ವಿಜೃಂಭಣೆಯಿಂದ ದೀಪಾಲಂಕಾರ ಮಾಡಿದರೆ ಸಾಮಾನ್ಯವಾಗಿ ಜನರು ದೀಪಗಳನ್ನು ನೋಡಲು ತಂಡೋಪ ತಂಡವಾಗಿ ಬರುತ್ತಾರೆ. ಇದರಿಂದ ಕೊರೋನಾ ನಿಯಂತ್ರಿಸಲು ಸಾಧ್ಯವೇ? ಈಗಾಗಲೇ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ದಿನನಿತ್ಯ ಸರಾಸರಿ ಸಾವಿರಗಟ್ಟಲೆ ಕೊರೋನಾ ಸೋಂಕು ಹರಡುತ್ತಿದೆ. ಮಕ್ಕಳಿಗೆ ಶಾಲಾ, ಕಾಲೇಜು ರಜೆ ಇರುವುದರಿಂದ ಪ್ರವಾಸಿಗರು ಕೊರೋನಾವನ್ನು ನಿರ್ಲಕ್ಷಿಸಿ, ನಗರದತ್ತ ಧಾವಿಸಿ ಬರುತ್ತಿದ್ದಾರೆ. ಜನದಟ್ಟಣೆಯಾಗಿ ಮತ್ತಷ್ಟು ಸೋಂಕು ತಗುಲಿದರೆ ಮುಂದೆ ಬೆಂಗಳೂರನ್ನೂ ಸಹ ಮೀರಿಸುವ ದಿನ ದೂರವಿಲ್ಲ. ಆದುದರಿಂದ ಕೊರೋನಾ ನಿಯಂತ್ರಣಕ್ಕೆ ಪೊಲೀಸರು, ಆಶಾ ಕಾರ್ಯಕರ್ತೆಯರು, ಆರೋಗ್ಯಾಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಕೊರೋನಾವನ್ನು ಹತೋಟಿಗೆ ತರಬೇಕೆಂದು ಆಶಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: