ಮೈಸೂರು

ಲಕ್ಷ್ಮಿಹೆಬ್ಬಾಳ್ಕರ್ ಹಣ ಹಂಚುತ್ತಿರುವ ವಿಡಿಯೋ ವೈರಲ್

ರಾಜ್ಯ ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಗುಂಡ್ಲುಪೇಟೆಯಲ್ಲಿ ಹಣ ಹಂಚುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.

ಲಕ್ಷ್ಮಿಹೆಬ್ಬಾಳ್ಕರ್ ಗುಂಡ್ಲುಪೇಟೆ ಕ್ಷೇತ್ರದ  ಕಬ್ಬಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಹನ್ನೂರು ಕೇರಿ ಗ್ರಾಮದಲ್ಲಿನ ಮನೆಯೊಂದರಲ್ಲಿ ಕುಳಿತು ಮಹಿಳೆಯರಿಗೆ ಹಣ ಹಂಚುತ್ತಿರುವ ವಿಡಿಯೋ ಬಿಜೆಪಿ ಕಾರ್ಯಕರ್ತರಿಗೆ ದೊರಕಿದ್ದು, ಅವರು ಅದನ್ನು ಚುನಾವಣಾಧಿಕಾರಿಗಳಿಗೆ ನೀಡಿದ್ದಾರೆ.

ಮನೆಯೊಂದರಲ್ಲಿ ಕುಳಿತು 2ಸಾವಿರ ಮುಖಬೆಲೆಯ ನೋಟುಗಳನ್ನು ನೀಡುತ್ತಿರುವುದು ಸ್ಪಷ್ಟವಾಗಿ ವಿಡಿಯೋದಲ್ಲಿ ಕಾಣ ಸಿಗುತ್ತಿದೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: