ಕರ್ನಾಟಕಪ್ರಮುಖ ಸುದ್ದಿ

ಸಿದ್ದರಾಮಯ್ಯಗೆ ನಾನಂದ್ರೆ ಭಯ: ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯ

ಬೆಂಗಳೂರು,ಅ.8-ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ನಾನಂದ್ರೆ ಭಯ. ಹೀಗಾಗಿ ಪದೇ ಪದೇ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ನಗರದ ಜೆಪಿ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಕುಮಾರಸ್ವಾಮಿ ಪೆದ್ದ ಎಂಬ ಸಿದ್ದರಾಮಯ್ಯರ ಹೇಳಿಕೆಗೆ ಕಿಡಿಕಾರಿದರು.

ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಪಕ್ಷದ ಬಗ್ಗೆ ಭಯವಿದೆ. ಅದರಲ್ಲೂ ಕುಮಾರಸ್ವಾಮಿ ಅಂದ್ರೆ ಇನ್ನೂ ಭಯವಿದೆ. ಹೀಗಾಗಿ ಅವರು ಪದೇ ಪದೇ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ಇನ್ನು ಮುಂದೆ ಅವರ ಬಗ್ಗೆ ಮಾತನಾಡಬಾರದು ಅಂದುಕೊಂಡು ಸುಮ್ಮನಾಗಿದ್ದೆ. ಈಗ ಅವರೇ ಮತನಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.

ಮೋದಿ ರಾಜ್ಯಕ್ಕೆ ಬಂದಾಗ 10 ಪರ್ಸೆಂಟ್ ಕಮಿಷನ್ ಸರ್ಕಾರ ಅಂದ್ರು. 25 ಸಾವಿರ ಕೋಟಿಗೆ 2500 ಸಾವಿರ ಕೋಟಿ ಬರುತ್ತಿತ್ತು. ಇವರಂತೆ ನಾನು ಕಮಿಷನ್ ನಡೆಸಿಲ್ಲ. ಬಡವರ ಬಗ್ಗೆ ಹೃದಯದಿಂದ ತೀರ್ಮಾನ ಮಾಡುತ್ತೇನೆ. ಹಿಂದೊಂದು ಮುಂದೊಂದು ಮಾತನಾಡುವುದಿಲ್ಲ ಎಂದರು.

ಸಿದ್ದರಾಮಯ್ಯ ಜಾತಿ ಆಧಾರದಲ್ಲಿ ರಾಜಕೀಯ ಮಾಡುತ್ತಾರೆ ಎಂದು ಆರೋಪಿಸಿದ ಕುಮಾರಸ್ವಾಮಿ, ಶಿರಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗದ ಸಭೆ ಮಾಡುತ್ತಾರೆ. ಜಾತಿ ಗಣತಿ ವರದಿ ಸ್ವೀಕರಿಸಬೇಕು ಅಂತಾ ಒತ್ತಾಯಿಸುತ್ತಾರೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಇವರು ಏನು ಮಾಡುತ್ತಿದ್ದರು? ಆಗ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು ಅಲ್ವೇ? ಆಗ ಯಾಕೆ ಇದರ ಬಗ್ಗೆ ಚರ್ಚೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಇನ್ನು ಉಪಚುನಾವಣೆ ಕುರಿತು ಮಾತನಾಡಿದ ಎಚ್‌ಡಿಕೆ, ಈಗಾಗಲೇ ಶಿರಾ ಅಭ್ಯರ್ಥಿಯ ಘೋಷಣೆ ಆಗಿದೆ. ಆರ್‌ಆರ್‌ ನಗರ ಅಭ್ಯರ್ಥಿಯ ವಿಚಾರದಲ್ಲಿ ಮೂವರ ಪೈಕಿ ಒಬ್ಬರನ್ನು ಆಯ್ಕೆ ಮಾಡುತ್ತೇವೆ. ಹನುಮಂತರಾಯಪ್ಪ ಮೂಲತಃ ಜೆಡಿಎಸ್‌ ಪಕ್ಷದವರಲ್ಲ, ಹಿಂದೆ ಕಾಂಗ್ರೆಸ್‌ನಲ್ಲೇ ಇದ್ದರು. ನಮ್ಮ ಪಕ್ಷಕ್ಕೆ ಬಂದು ಈಗ ಮತ್ತೆ ಕಾಂಗ್ರೆಸ್‌ಗೆ ಹೋಗಿದ್ದಾರೆ ಎಂದರು. (ಎಂ.ಎನ್)

Leave a Reply

comments

Related Articles

error: