Uncategorized

ಹೆಲಿಕಾಪ್ಟರ್ ರೈಡ್ ಗೆ ಚಾಲನೆ

ದಸರಾ ಮಹೋತ್ಸವ ಪ್ರಯುಕ್ತ ಆಯೋಜಿಸಿರುವ ಹೆಲಿಕಾಪ್ಟರ್ ರೈಡ್ ಕಾರ್ಯಕ್ರಮಕ್ಕೆ ಬುಧವಾರ ಲಲಿತಮಹಲ್ ಹೆಲಿಪ್ಯಾಡ್ ನಲ್ಲಿ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

ಮೈಸೂರು ಜಿಲ್ಲಾಧಿಕಾರಿ ರಂದೀಪ್, ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟೇಶ್ ಮತ್ತು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ನವೀನ್ ದಾಸ್ ಸಿಂಗ್ ಅವರನ್ನು ಹೊತ್ತ ಹೆಲಿಕಾಪ್ಟರ್ ಅಲ್ಲೇ ಒಂದು ಸುತ್ತು ತಿರುಗಿ ಬಂತು.

ಮೈಸೂರು ನಗರ ಸೌಂದರ್ಯವನ್ನು ಆಕಾಶದಿಂದ ವೀಕ್ಷಿಸಿ ಸಂಭ್ರಮಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹೆಲಿಕಾಪ್ಟರ್ ಝೂ, ಪ್ಯಾಲೇಸ್, ಸೇಂಟ್ ಫಿಲೋಮಿನಾ ಚರ್ಚ್, ಚಾಮುಂಡಿ ಬೆಟ್ಟದ ಸುತ್ತಮುತ್ತ ಹಾರಾಟ ನಡೆಸಲಿದ್ದು, ಪ್ರತಿ ಟಿಕೇಟಿಗೆ 2,499ರೂ. ನಿಗದಿಪಡಿಸಲಾಗಿದೆ. ವಿಕಲಚೇತನರಿಗೆ ಮತ್ತು 10ನೇ ತರಗತಿಯ ಒಳಗಿನ ವಿದ್ಯಾರ್ಥಿಗಳಿಗೆ 2,229ರೂ. ನಿಗದಿಪಡಿಸಲಾಗಿದೆ. ಒಂದು ಟ್ರಿಪ್ ನಲ್ಲಿ 6ಮಂದಿ ಪ್ರಯಾಣಿಕರು ಹಾಗೂ ಓರ್ವ ಪೈಲಟ್ ಇರುತ್ತಾರೆ. ಪ್ರತಿದಿನ 50ಟ್ರಿಪ್ ಸಂಚರಿಸಲಿದ್ದು, ಹೆಲಿಪ್ಯಾಡ್ ನಲ್ಲಿ ತೆರೆಯಲಾಗಿರುವ ಕೌಂಟರ್ ನಲ್ಲಿ ಟಿಕೇಟ್ ಪಡೆದು ಸಂಚರಿಸಬಹುದು

Leave a Reply

comments

Related Articles

error: