ಮೈಸೂರು

ಸ್ವಪ್ರತಿಷ್ಠೆಯಿಂದಾಗಿ ನಂಜನಗೂಡು ಉಪಚುನಾವಣೆ : ಮುಖ್ಯಮಂತ್ರಿ ಚಂದ್ರು

ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಎರಡು ಪಕ್ಷಗಳು ನೇರ ಹಣಾಹಣಿಯಲ್ಲಿದ್ದು ಯಾವುದೇ ಅಭ್ಯರ್ಥಿಗೂ ಬಹು ಅಂತರದಿಂದ ಗೆಲುವು ಸಾಧ್ಯವಿಲ್ಲವೆಂದು ಕನ್ನಡ ಕಾವಲು ಸಮಿತಿ ಅಧ್ಯಕ್ಷ, ಕಲಾವಿದ ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಉಪ ಚುನಾವಣೆ ಸ್ವಾಭಿಮಾನ ಪ್ರತಿಷ್ಠೆಯ ಕಾರಣಕ್ಕಾದರೆ ಮತ್ತೊಂದು ಅಕಾಲಿಕ ಮೃತ್ಯುವಿನಿಂದಾಗಿ ಸೃಷ್ಟಿಯಾಗಿದ್ದು, ಇದನ್ನು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿಯೆಂದು ಪರಿಗಣಿಸುವಂತಿಲ್ಲ. ಎರಡು ಕ್ಷೇತ್ರಗಳಲ್ಲಿಯೂ  ಕಾಂಗ್ರೆಸ್ ಗೆಲುವು ಸಾಧಿಸುವುದು ನಿಶ್ಚಯ, ಇದೊಂದು ಅನಿವಾರ್ಯ ಚುನಾವಣೆಯಾಗಿದ್ದು ಕ್ಷೇತ್ರದಲ್ಲಿ ಎಲ್ಲೆಡೆ ಆಡಳಿತ ಪಕ್ಷದ ಅಲೆಯಿದೆ ಎಂದರಲ್ಲದೇ, ಕಡ್ಡಾಯ ಮತದಾನವಾಗಬೇಕೆಂದು ಆಶಿಸಿದರು.

ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಎಂ.ಸಿ.ವೇಣುಗೋಪಾಲ ಮಾತನಾಡಿ ರಾಜ್ಯ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಯನ್ನು ಶೇ.90ರಷ್ಟು ಪೂರೈಸಿದ್ದು ಮುಂಬರುವ ವರ್ಷದಲ್ಲಿ ಎಲ್ಲವನ್ನೂ ಈಡೇರಿಸಲಾಗುವುದು. ಎಸ್.ಎಂ.ಕೃಷ್ಣ ಹಿರಿಯ ರಾಜಕಾರಣಿ. ಪಕ್ಷದ ಎಲ್ಲಾ ಅಧಿಕಾರವನ್ನು ಅನುಭವಿಸಿದವರು. ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕಾರ್ಯವೈಖರಿ ಸರಿಯಿಲ್ಲದಿದ್ದರೆ ಮಾರ್ಗದರ್ಶನ ಮಾಡಿ ಸಲಹೆ ಸೂಚನೆ ನೀಡಬಹುದಿತ್ತು, ಅದರೆ ಸ್ವಪ್ರತಿಷ್ಠೆಯಿಂದ ಸ್ವಾರ್ಥತೆಯಿಂದ ಪಕ್ಷ ತ್ಯಜಿಸಿ ಇಂದು ಪಕ್ಷದ ವಿರುದ್ಧವೇ ಪ್ರಚಾರ ನಡೆಸುತ್ತಿರುವುದು ಉಪ್ಪು ತಿಂದ ಮನೆಗೆ ದ್ರೋಹ ಬಗೆದಂತೆ ಎಂದರು.  (ಕೆ.ಎಂ.ಆರ್-ಎಸ್.ಎಚ್)

Leave a Reply

comments

Related Articles

error: